Ad imageAd image

ಕುಂಬಾರಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ವಹಿಸದಿರಲು ಒತ್ತಾಯ

Bharath Vaibhav
ಕುಂಬಾರಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ವಹಿಸದಿರಲು ಒತ್ತಾಯ
WhatsApp Group Join Now
Telegram Group Join Now

ಬೆಂಗಳೂರು: ಯಲಹಂಕ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಕುಂಬಾರಹಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ಗ್ರಾಮ ಸಭೆ ಆಯೋಜಿಸಿದ್ದ. ಕುಂಬಾರಹಳ್ಳಿಯ ವಾರ್ಡ್ ಸಭೆಯಲ್ಲಿ ಸರ್ವೇ ನಂ.8 ರ ಜಮೀನಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ನಲ್ಲಿ ಸ್ಟೇ ಇರುವ ಹಿನ್ನೆಲೆಯಲ್ಲಿ ಆ ಜಮೀನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದರು.

ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವರಿಕೆ ಮಾಡಿ ಕೋರ್ಟೀನ ಆದೇಶ ಪ್ರಮಾಣ ಪತ್ರದ ಪ್ರತಿ ಜೊತೆಗೆ ಮನವಿ ಪತ್ರವನ್ನು ನೀಡಿದರು.

 

ಸರ್ವೇ ನಂ.8ರ ಜಮೀನಿಗೆ ಸಂಬಂಧಿಸಿದಂತೆ ಕುಂಬಾರಹಳ್ಳಿಯ ಗ್ರಾಮಸ್ಥರ ಪರವಾಗಿ ಮಾತನಾಡಿದ ಗ್ರಾಮಸ್ಥ ನರಸಿಂಹರಾಜು ಎನ್, ‘ಕುಂಬಾರಹಳ್ಳಿಯ ಜಮೀನ ಸರ್ವೆ ನಂ. 8 ರಲ್ಲಿ ನಾವು ಸುಮಾರು ನಲವತ್ತು ವರ್ಷಗಳಿಂದ 45 ಕುಟುಂಬಗಳು ಉಳುಮೆ (ಸಾಗುವಳಿ)ವ್ಯವಸಾಯ ಮಾಡುತ್ತಾ ಬಂದಿರುತ್ತೇವೆ.
ಕೆಲವು ಕಿಡಿಗೇಡಿಗಳು ಮತ್ತು ಕಾಣದ ಕೈಗಳು ಇದು ಗೋಮಾಳ ಎಂದು ಪ್ರಚಾರ ಮಾಡಲು ಯತ್ನಿಸಿದಾಗ ನಾವು ಆ ಜಾಗದ ಮೇಲೆ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದೇವೆ. ಹಾಗಾಗಿ ನ್ಯಾಯಾಲಯದಲ್ಲಿ ಪ್ರಕರಣ ಇದ್ದು ಕೋರ್ಟ್ ತೀರ್ಮಾನವಾಗುವವರೆಗೂ ಯಾವುದೇ ನಿರ್ಧಾರ ಸದರಿ ಜಮೀನಿನ ವಿಷಯದಲ್ಲಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದ್ದೇ ಆದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ’, ಎಂದು ತಿಳಿಸಿದರು.
ಕುಂಬಾರಹಳ್ಳಿ ವಾರ್ಡ್ ಸಭೆಗೆ ಸಂಬಂಧಿಸಿದ ಕರಪತ್ರದಲ್ಲಿ ನಿವೇಶನಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸ್ಥಳಿಯರಿಗೆ ಹೊರತುಪಡಿಸಿ ಬೇರೆ ಕಡೆಯಿಂದ ಬಂದು ವಾಸವಾಗಿರುವ ಹಲವಾರು ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ.

ಈ ಮನವಿ ಸ್ವೀಕರಿಸಿದ ಪಂಚಾಯಿತಿ ಅಭಿವೃದ್ಧಿ ಅಧಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಅಧ್ಯಕ್ಷರಿಂದ ಯಾವುದೇ ಸಮರ್ಪಕವಾಗಿ ಉತ್ತರ ನೀಡಲಿಲ್ಲ ಎಂದರು. ‌ ಈ ಸಂದರ್ಭದಲ್ಲಿ ಕುಂಬಾರಹಳ್ಳಿ ಗ್ರಾಮಸ್ಥರು, ಪಂಚಾಯಿತಿ ಅಧಿಕಾರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!