ಚಿಟಗುಪ್ಪ : ಪಟ್ಟಣದ (ಫಾತ್ಮಪುರ) ವಾರ್ಡ್ 23 ಸುಮಾರು 3 ಕಿಲೋಮೀಟರ್ ಪಟ್ಟಣದಿಂದ ದೂರವಿದೆ.ಪಡಿತರ ಅಕ್ಕಿಗಾಗಿ 3 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ.ಪ್ರಿಯದರ್ಶಿನಿ ಕಾಲೋನಿ ಎಲ್ಲಿಯೂ ಕೂಡ ಇಂತಹದ್ದೇ ಸಮಸ್ಯೆವಿದೆ.ಇಲ್ಲಿಂದ ಬಂದು ಪಡಿತರ ಅಕ್ಕಿ ತೆಗೆದುಕೊಳ್ಳಲು ಇಡಿ ದಿವಸ ಕಳೆಯುತ್ತದೆ.ವಾರ್ಡ್ನಲ್ಲಿ ದಿನ ಕೂಲಿ ಕಾರ್ಮಿಕರು ಹೆಚ್ಚಾಗಿರುವುದರಿಂದ ಕೂಲಿ ಕೆಲಸಕ್ಕೆ ಹೋಗಿದರೆ ಅಕ್ಕಿ ಸಿಗುವುದಿಲ್ಲ,ಅಕ್ಕಿ ಪಡೆಯಲು ಬಂದರೆ ಕೂಲಿ ಕೆಲಸ ಸಿಗುವುದಿಲ್ಲ.
ಅದಕ್ಕಾಗಿ ಬಡ ಜನರ ಯೋಗ ಯೋಗಕ್ಷೇಮ ಕಾಪಾಡಲು ಸ್ಥಳೀಯವಾಗಿ ಹೊಸ ಪಡಿತರ ಅಂಗಡಿ ಆರಂಭಿಸಬೇಕು ಎಂದು ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಘಟಕದಿಂದ ಬುಧವಾರ ಪ್ರತಿಭಟನೆ ಮೂಲಕ ಒತ್ತಾಯಿಸಿ ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಮನವಿ ಪತ್ರವನ್ನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಪವನ ಪೂಜಾರಿ,ಉಪಾಧ್ಯಕ್ಷ ಸತೀಶ್ ಗಂಜಿ,
ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಕನಾಡೆ ಉಪಾಧ್ಯಕ್ಷರಾದ ಸೋಮನಾಥ ಸ್ವಾಮಿ ವರವಟ್ಟಿ, ನಾಗರಾಜ ಹುಡುಗಿ,ಕಾಶಿನಾಥ್ ರೇಕುಳಗಿ,ಕನ್ನಡ ಸೇನೆ ಕಾರ್ಯಕರ್ತರು ಹಾಗೂ ಮಹಿಳೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸಜೀಶ ಲಂಬುನೋರ