ಸವದತ್ತಿ : ಸವದತ್ತಿ ತಾಲೂಕಿನ ಹಲವು ಗ್ರಾಮಗಳಿಗೆ ಸಚಿವರಾದ ಶ್ರೀ ಸತಿ ಜಾರಕಿಹೊಳಿಯವರು ಭೇಟಿ ಮಾಡಿ ಕಾಮಗರಿಗಳನ್ನು ಪರಿಶೀಲಿಸಿದರು.

ನಿನ್ನೆ ದಿನಾಂಕ 27 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಸವದತ್ತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋವಿನಕೊಬ್ಬ ಹತ್ತಿರ ಜಿ ಆರ್ ಬಿ ಸಿ ಕೆನಾಲ್ ಕಾಮಗಾರಿ ವೀಕ್ಷಿಸಿದ ನಂತರ ಅಕ್ಕಿಸಾಗರ ಗ್ರಾಮದ ಹತ್ತಿರವಿರುವ ಹಳ್ಳದ ಕಾಮಗಾರಿ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಲು ಸೂಚನೆ ನೀಡಿದರು.

ನಂತರ ಗೋಕಾಕ ತಾಲೂಕಿನ ಬಗರನಾಳ ಮನ್ನಿಕೇರಿ ಹಾಗೂ ಬೇಟಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಬಗರನಾಳ ಸರಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಭೇಟಿ ನೀಡಿ, ಕುಂದುಕೊರತೆಗಳನ್ನು ಆಲಿಸಿದರು.
ವರದಿ : ರಾಜು ಮುಂಡೆ




