ಸೇಡಂ: ತಾಲೂಕಿನ ಸಿಲಾರಕೊಟ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಮುಧೋಳ್ ವಲಯ ಅಧ್ಯಕ್ಷರಾದ ಸಾಬಪ್ಪ ಅಬ್ಬಗಳ ಹಾಗೂ ಅಂಬೇಡ್ಕರ ಯುವಕರ ಸಂಘದ ಮಾಜಿ ಅಧ್ಯಕ್ಷರಾದ ಸಾಯಿಲು ಡಬ್ಬು ಅವರು ಬೇಟಿ ನೀಡಿ. ಬಿಸಿಯೂಟ ಹಾಗೂ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.

ಇದೇ ಸಮಯದಲ್ಲಿ ಸಾಬಪ್ಪ ಅವರು ಶಾಲೆಯ ಸುತ್ತಮುತ್ತಲು ಸ್ವಚ್ಛತೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು ಹಾಗೂ ಶಾಲೆಯ ಹಿಂಭಾಗದಲ್ಲಿರುವ ಖಾಲಿ ಜಾಗವನ್ನು ಮಕ್ಕಳಿಗೆ ಆಟದ ಮೈದಾನ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಪ್ರತಿ ವರ್ಷ ನಮ್ಮ ಶಾಲೆಯು ಕ್ರೀಡಾ ಸ್ಪರ್ದೆಯಲ್ಲಿ ಜಿಲ್ಲಾ ಮಟ್ಟದ ವರೆಗೆ ತಲುಪುತ್ತಿದೆ.
ಆದರೆ ಸರಿಯಾದ ಮೈದಾನ ಇಲ್ಲಾ ಅದ ಕಾರಣ ಶಾಲೆಯ ಹಿಂಬಾಗದ ಸರಕಾರ ಸ್ಥಳವಾಗಿದ್ದು ಅದನ್ನು ಸ್ವಚ್ಛತೆ ಮಾಡಿಕೊಟ್ಟರೆ ಮಕ್ಕಳಿಗೆ ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿದರು.
ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ನೀಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




