ರಾಮದುರ್ಗ :-ಇಲ್ಲೊಬ್ಬ ಆರ್ ಟಿ ಓ ಇನ್ಸ್ಪೆಕ್ಟರ್ ಕಂಠ ಪೂರ್ತಿ ಕುಡಿದು ಕರ್ತವ್ಯ ನಿರ್ವಹಿಸುತ್ತಿರುವ ಘಟನೆ ನಡೆದಿದೆ ಇಂತಹ ಅಧಿಕಾರಿಯ ನಿರ್ಲಕ್ಷತನದಿಂದ ರಸ್ತೆ ಮೇಲೆ ಅಪಘಾತಗಳ ಜೊತೆಗೆ ಅಕ್ರಮ ನೋಂದಾವಣಿ ಕೂಡ ನಡೆವುದು ಗ್ಯಾರಂಟಿ. ಕುಡಿದು ವಾಹನ ಚಲಾಯಿಸುವ ಸಾರ್ವಜನಿಕರಿಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಅಧಿಕಾರಿಯೇ ಕಂಠಪೂರ್ತಿ ಕುಡಿದು ಕರ್ತವ್ಯದಲ್ಲಿದ್ದರೆ ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ವೀಕ್ಷಕರೇ ಇದು ಎಲ್ಲಿ ನಡೆದ ಘಟನೆ ಅಂತೀರಾ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ ಆ ಮಾಹಾನುಭಾವ ಅಧಿಕಾರಿ ಯಾರೆಂದರೆ, ರಾಮದುರ್ಗ ತಾಲೂಕಿನ ಆರ್ ಟಿ ಓ ಕಛೇರಿಯ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಾದೇವಪ್ಪ ತಳವಾರ ಎಂಬ ಅಧಿಕಾರಿಯೊಬ್ಬರು ಕಂಠಪೂರ್ತಿ ಕುಡಿದು ಕೆಲಸಕ್ಕೆ ಹಾಜರಾಗುವುದಲ್ಲದೆ ವಾಹನಗಳ ನೋಂದಣಿ, ತಪಾಸಣೆ ಹಾಗೂ ವಾಹನ ಚಾಲನಾ ಪರವಾನಿಗೆ ನೀಡುತ್ತಿರುವುದು ಎಷ್ಟು ಸರಿ? ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸನ್ಸ್ ನೀಡಬೇಕಾದರೆ ದಾಖಲೆಗಳ ಪರಿಶೀಲನೆ ಜೊತೆಗೆ ಚಾಲನಾ ಪರೀಕ್ಷೆ ಕೂಡ ನಡೆಸಬೇಕಾಗುತ್ತದೆ. ಅಧಿಕಾರಿಗಳು ನಡೆಸುವ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಡ್ರೈವಿಂಗ್ ಲೈಸೆನ್ಸ್ ವಿತರಿಸಬೇಕಾಗುತ್ತದೆ. ಆದರೆ ಇಲ್ಲಿ ಅಧಿಕಾರಿಯೇ ಕಂಠಪೂರ್ತಿ ಕುಡಿದು ಕೆಲಸಕ್ಕೆ ಹಾಜರಾದರೆ ಗತಿಯೇನು?
ಈ ಘಟನೆ ನಡೆದ ಸ್ಥಳದಲ್ಲಿ ಇವರ ಮೇಲಾಧಿಕಾರಿಯಾದ ಎ ಆರ್ ಟಿ ಓ ಅಧಿಕಾರಿ ಬಸವರಾಜ ಬಾಗೀಲ ಅವರು ಉಪಸ್ಥಿತರಿದ್ದರು ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಘಟನೆಯನ್ನು ಸಮರ್ಥಿಸಿಕೊಂಡು ಮಾಧ್ಯಮದವರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಕೈ ಚಲ್ಲಿದ್ದಾರೆ.ಇನ್ನೂ ಈ ಘಟನೆ ಕುರಿತು ಬೆಳಗಾವಿ ವಿಭಾಗೀಯ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಮ್.ಪಿ. ಓಂಕಾರೇಶ್ವರಿ ಪ್ರತಿಕ್ರಿಯೆ ನೀಡಿದ್ದು ಆರ್ ಟಿ ಓ ಇನ್ಸ್ಪೆಕ್ಟರ್ ಮಹಾದೇವಪ್ಪ ತಳವಾರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಂದು ಭರವಸೆ ನೀಡಿದಾರೆ.
ವರದಿ:- ಮಂಜುನಾಥ ಕಲಾದಗಿ