ರಾಯಬಾಗ: ನಿನ್ನೆ ದಿನಾಂಕ 07-07-2024 ರಂದು ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ರಾಯಬಾಗ ತಾಲೂಕಿನ ನಿಪಣಾಳ ಗ್ರಾಮದ ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷಣ.
ಮೂರ್ತಿ ಪ್ರತಿಷ್ಠಾಪನೆ ಮುಂಚೆ ಜರುಗಿದ ಬೃಹತ್ ಕುಂಭಮೇಳದ ಮೆರವಣಿಗೆಯಲ್ಲಿ ಭಾಗವಹಿಸಿದರು.
ಪ.ಪೂ. ಜಗದ್ಗುರು ವೇದಾಂತಾಚಾರ್ಯ ಅವರು ಮತ್ತು ನಿಪಣಾಳ ಗ್ರಾಮದ ಶ್ರೀ ಸೋಮಲಿಂಗೇಶ್ವರ ದೇವರುಷಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು.
ರಾಯಬಾಗ ಮತಕ್ಷೇತ್ರದ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಶ್ರೀ ಕಾಕಾಸಾಹೇಬ ಪಾಟೀಲ, ಶ್ರೀ ರಮಾಕಾಂತ ಕೋಂಡುಸ್ಕರ್, ಶ್ರೀ ಸುರೇಶರಾವ ಸಾರೆ ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ