ಅರಸಿಕೆರೆ : ಹೋರಾಟಗಾರರದ ಮಂಜು ಅವರು ಸುಮಾರು ವರ್ಷಗಳಿಂದ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಾಗಿ ಉತ್ತಮವಾದ ಸಮಾಜದ ಕೆಲಸಗಳನ್ನು ಮಾಡುತ್ತಾ ಜನದಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ.

ಹಾಸನ ರಸ್ತೆ ವಾರ್ಡ್ ನಂಬರ್ ಎರಡರಲ್ಲಿ ಸುಮಾರು 45 ವರ್ಷಗಳಿಂದ ಚರಂಡಿ ಇಲ್ಲದೆ ವಾರ್ಡಿನ ಜನರು ಕಷ್ಟಪಡುತ್ತಿರುವಾಗ ಅದಕ್ಕೆ ಸ್ಪಂದಿಸಿ ವಾರ್ಡಿನ ಚರಂಡಿ ಕೆಲಸವನ್ನು ಮಾಡಿಕೊಡುವುದರ ಮೂಲಕ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಸುಮಾರು 45 ವರ್ಷಗಳಿಂದ ರಸ್ತೆಯಲ್ಲಿ ಲೈಟ್ ಕಂಬದ ವ್ಯವಸ್ಥೆ ಇಲ್ಲದ ಕಾರಣ ವಾರ್ಡಿನ ಜನರು ಕಷ್ಟಪಡುತ್ತಿರುವಾಗ ಅದನ್ನು ಅರಿತು ಹೋರಾಟ ಮಾಡುವುದರ ಮೂಲಕ ಲೈಟ್ ಕಂಬವನ್ನು ಹಾಕಿಸುವ ಕೆಲಸಕ್ಕೆ ಮುಂದಾಗಿ ಜನರ ಸಮಸ್ಯೆಗಳ ಸ್ಪಂದಿಸಿ ನಾಲ್ಕು ಕಂಬಗಳನ್ನು ಅಳವಡಿಸುವುದರ ಮೂಲಕ ವಾರ್ಡಿನ ಕೆಲಸಗಳನ್ನು ಮಾಡುವುದರಲ್ಲಿ ಆತ್ಮ ಸಂತೋಷವಿದೆ ಮುಂದಿನ ದಿನಗಳಲ್ಲಿ ಎಲೆಕ್ಷನ್ಗಾಗಿ ಸ್ಪರ್ಧಿಸಿ ಮುಂದಿನ ದಿನಗಳಲ್ಲಿ ಕೌನ್ಸಿಲ್ ಆಗಿ ಬರುವುದಾದರೆ ಇನ್ನು ಉತ್ತಮವಾದ ಕೆಲಸಗಳನ್ನು ಮಾಡುವ ಮೂಲಕ ವಾರ್ಡುಗಳ ಸಮಸ್ಯೆಗಳನ್ನು ಸ್ಪಂದಿಸುವೆ ಹೀಗಿಂದಲೇ ಜನರ ಕಷ್ಟಗಳನ್ನು ಸಮಸ್ಯೆಗಳನ್ನು ಅರಿತು ಜನರ ಆಶೀರ್ವಾದಕ್ಕೆ ಪಾತ್ರರಾಗುತ್ತಿನೆಂದು ತಮ್ಮ ಆತ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು.
ವಾರ್ಡಿನ ಜನರು ಲೈಟ್ ಕಂಬ ಹಾಕುತ್ತಿರುವುದು ನಮ್ಮ ಬೀದಿಗೆ ಆತ್ಮ ಸಂತೋಷವಾಗಿದೆ ಎಂದು ವಾರ್ಡಿನ ಜನರ ಸಂತೋಷವನ್ನು ವ್ಯಕ್ತಪಡಿಸಿದರು.
ವರದಿ : ರಾಜು




