Ad imageAd image
- Advertisement -  - Advertisement -  - Advertisement - 

ಹುತ್ತಕೆ ಹಾಲೆರೆಯುವು ಬದಲು ಹಸಿದ ಮಕ್ಕಳಿಗೆ ನೀಡಿ

Bharath Vaibhav
ಹುತ್ತಕೆ ಹಾಲೆರೆಯುವು ಬದಲು ಹಸಿದ ಮಕ್ಕಳಿಗೆ ನೀಡಿ
WhatsApp Group Join Now
Telegram Group Join Now

ರಾಮದುರ್ಗ:-ರಾಜ್ಯದೆಲ್ಲೆಡೆ ಇಂದು ನಾಗರ ಹಾವಿನ ವಿಗ್ರಹಕ್ಕೆ ಹಾಲೆರೆದು ನಾಗರ ಪಂಚಮಿ ಹಬ್ಬ ಆಚರಿಸುತ್ತಿದ್ದರೆ,ರಾಮದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಾಲು ಹಂಪಲು ವಿತರಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನವ ಬಂಧುತ್ವ ವೇಧಿಕೆ ಹಾಗೂ ಕರ್ನಾಟಕ ಭೀಮ್ ಸೇನೆ ಸಮಿತಿ ರಾಮದುರ್ಗ ಮತ್ತು ವಿವಿಧ ತಾಲೂಕು ಬಸವ ಪರ ಸಂಘಟನೆ ವತಿಯಿಂದ ಬಸವ ಪಂಚಮಿ ನಿಮಿತ್ಯವಾಗಿ ಹಾಲು ಹಣ್ಣು ಬಡ ಮಕ್ಕಳಗೆ ಹಾಗೂ ರೋಗಿಗಳಿಗೆ ರಾಮದುರ್ಗ ತಾಲೂಕು ಆಸ್ಪತ್ರೆ ಯಲ್ಲಿ ವಿತರಿಸಲಾಯಿತು.

ನಾಗರಪಂಚಮಿ ಆಚರಣೆ ಹಾಲು ನೀಡುವ ಮೂಲಕ ನಾಗರ ಪಂಚಮಿ ಹಬ್ಬ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಬಡ ಮಕ್ಕಳಿಗೆ ಕುಡಿಯಲು ಹಾಲು ಹಂಪಲು ನೀಡಿ ಮಕ್ಕಳೊಂದಿಗೆ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.

ನಾಗರ ಹಾವಿನ ವಿಗ್ರಹಕ್ಕೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ನೀಡಿ ನಾಗರ ಪಂಚಮಿಯನ್ನು ಬಸವ ಪಂಚಮಿ ಎಂದು ಆಚರಣೆ ಮಾಡಲಾಗುತ್ತಿದೆ. ಹಸಿದ ಜನರಿಗೆ ಊಟ ಕೊಡುವ ಬದಲು ನಾವು ಹೊಟ್ಟೆ ತುಂಬಿದವರಿಗೆ ಊಟ ಕೊಡಬೇಕು.

ಹಸಿವು ಎಂದು ಮನೆ ಮುಂದೆ ಬರುವವರಿಗೆ ಅಡಿಗೆ ಆಗಿಲ್ಲ ಮುಂದೆ ಹೋಗಪ್ಪ ಎಂದು ತಳ್ಳುತ್ತೇವೆ. ಅದೇ ಹಬ್ಬ ಹರಿದಿನಗಳಲ್ಲಿ ತಿನ್ನಲು ಆಗದ ದೇವರಿಗೆ ಮೃಷ್ಠಾನ್ನ ಭೋಜನ ಸಿದ್ಧಪಡಿಸಿ ನೈವೇದ್ಯಕ್ಕೀಡುತ್ತಾರೆ. ಹಸಿದವನಲ್ಲಿ ದೇವರಿದ್ದಾನೆ. ಹಾಗಾಗಿ ಹಸಿದವರಿಗೆ ಆಹಾರ ನೀಡಿ ಎಂದು ಮಂಜುನಾಥ್ ಮಾದರ ಮಕ್ಕಳಿಗೆ ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ತಾಲೂಕು ಸಂಘಟನೆ ಮುಖಂಡರಾದ
ಮಂಜುನಾಥ ಮಾದರ,ಶ್ರೀಕಾಂತ್ ಮಾದರ,ಭೀಮಶಿ ಮಾದರ,ರಾಜು ಮಾದರ,ಪುಷ್ಪಾ ಹಿರೇಮಠ್,ಸಾದಿಕ್ ದಿಲಾವರ್,ಮುದಸಿರ್ ಭೈರಕದಾರ್, ಸಾಗರ್ ಮುನವಳ್ಳಿ, ನಿಂಗಪ್ಪ ಕರಿಗಾರ್,ಮತ್ತು ವಿವಿಧ ಎಲ್ಲಾ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು

ವರದಿ:-ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
Share This Article
error: Content is protected !!