ಬೆಂಗಳೂರು :ರಾಜಧಾನಿಯ ಹೋಟೆಲ್ ಒಂದರ ಡಿಸ್ ಪ್ಲೇ ಬೋರ್ಡಿನಲ್ಲಿ ಕನ್ನಡಿಗರನ್ನು ಅವಹೇಳನ ಮಾಡಿರುವ ಘಟನೆ ನಡೆದಿದೆ.
ಜಿಎಸ್ ಸೂಟ್ಸ್ ಎಂಬ ಹೋಟೆಲಿನ ಡಿಸ್ ಪ್ಲೇ ಬೋರ್ಡಿನಲ್ಲಿ ಕನ್ನಡಿಗರು ಮಾದರ್*ದ್ ಗಳು ಎಂದು ನಿಂದಿಸಲಾಗಿದೆ. ಸ್ಥಳೀಯರು ಇದನ್ನು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ , ಹೋಟೆಲ್ ಮಾಲಿಕರ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ.ಇದು ಡಿಸ್ ಪ್ಲೇ ಬೋರ್ಡ್ ಮಾಡಿರುವವರ ಅಥವಾ ಹೋಟೆಲ್ ಕೆಲಸಗಾರರ ದುಷ್ಕೃತ್ಯವಿರಬಹುದೆಂದು ಶಂಕಿಸಲಾಗಿದೆ.
ಮಡಿವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೋರ್ಡ್ ಅನ್ನು ತೆರವುಗೊಳಿಸಿದ್ದಾರೆ. ಹೋಟೆಲ್ ಮಾಲಿಕ ಕನ್ನಡದವನಲ್ಲ. ಅವನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿರಲು ಸಾಧ್ಯವಿಲ್ಲ.
ಆದರೂ ಆತನ ಸ್ಪಷ್ಟೀಕರಣ ಬಯಸಿ ವಿಚಾರಣೆ ನಡೆಸಲಾಗಿದೆ. ಒಂದು ವೇಳೆ ನಿರ್ಲಕ್ಷ್ಯ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




