ಮಲ್ಲಮ್ಮನ ಬೆಳವಡಿ :ಕುಟುಂಬದ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಗೆ ಜೀವ ವಿಮೆ ಮಾಡಿಸುವುದು ಮಹತ್ವದ ನಿರ್ಧಾರ
ಮಹಾಂತೇಶ ಎಮ್.ಸಿ.ಅಭಿಪ್ರಾಯ.
ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಯಾವಾಗ ಯಾರಿಗೆ ಏನಾಗುತ್ತದೆ ಎಂಬುದು ವಿಧಿ ಲಿಖಿತ ಜೀವನದಲ್ಲಿ ಆಕಸ್ಮಿಕವಾಗಿ ಎದುರಾಗುವ ಘಟನೆಗಳಿಂದ ಇಡೀ ಕುಟುಂಬಕ್ಕೆ ಆಸರೆಯಾದವರನ್ನು ಕಳೆದು ಕೊಳ್ಳಬೇಕಾದ ಸಂದರ್ಭಗಳು ಬರುತ್ತವೆ. ಆದ್ದರಿಂದ ಪರಿವಾರದ ಸುರಕ್ಷತೆ ಮತ್ತು ಆರ್ಥಿಕ ಭದ್ರತೆಗೆ ಪ್ರತಿಯೊಬ್ಬರು ಜೀವ ವಿಮೆ ಮಡಿಸಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಬೈಲಹೊಂಗಲ ಶಾಖಾಧಿಕಾರಿ ಮಹಾಂತೇಶ ಎಮ್.ಸಿ.ಹೇಳಿದರು.
ಮಲ್ಲಮ್ಮನ ಬೆಳವಡಿಯ ಭಾರತೀಯ ಜೀವ ವಿಮಾ ನಿಗಮದ ಸಲಹಾ ಕೇಂದ್ರ ಮತ್ತು ವಿಮಾ ಪಾವತಿ ಕಛೇರಿ ಕಾರ್ಯಾಲಯದಲ್ಲಿ ವಿಮಾ ಜಾಗೃತಿ ಹಾಗೂ ನೂತನ ವರ್ಷದ ಬೆಳವಡಿ ಮಲ್ಲಮ್ಮನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಜೀವ ವಿಮಾ ಮುಖ್ಯ ಪ್ರತಿನಿಧಿ ಪ್ರಸ್ತಾವಿಕವಾಗಿ ಮಾತನಾಡಿ ಪ್ರಕಾಶ ಹುಂಬಿ ೧೯೫೬ ರಿಂದ ಪ್ರಾರಂಭವಾದ ಭಾರತೀಯ ಜೀವ ವಿಮಾ ನಿಗಮ ಕೇಮದ್ರ ಸಕರಕಾರದ ಸಹಭಾಗಿತ್ವದಲ್ಲಿ ಜನರಿಗೆ ಸೇವೆ ಒದಗಿಸುತ್ತಿದೆ. ಜೀವ ವಿಮೆಯಿಂದ ಅನೇಕ ಪ್ರಯೋಜನಗಳಿವೆ ಕುಟುಂಬಕ್ಕೆ ಆರ್ಥಿಕ ಸಹಾಯ, ಮಕ್ಕಳ ಶಿಕ್ಷಣ, ಮದುವೆ, ಮನೆ ನಿರ್ಮಾಣ, ನೆಮ್ಮದಿಯ ನಿವೃತ್ತಿ ಜೀವನ, ಕಷ್ಟದ ಸಮಯದಲ್ಲಿ ಸಾಲ ಹೀಗೆ ಜನರಿಗೆ ಸಾಕಷ್ಟು ಅನುಕೂಲಗಳಿವೆ. ಜೀವ ವಿಮೆಯ ಪ್ರತಿ ಕಂತುಗಳನ್ನು ತಪ್ಪದೆ ಪಾವತಿಸುವುದರಿಂದ ಹೆಚ್ಚಿನ ಗರಿಷ್ಠ ಆರ್ಥಿಕ ಭದ್ರತೆಯ ಲಾಭ ಪಡೆಯಬಹುದು ಎಂದು ಹೇಳಿದರು.
ಬೈಲಹೊಂಗಲ ಶಾಖೆಯ ಆರ್.ಎಸ್.ಪಾಟೀಲ್, ವೀರರಾಣಿ ಮಲ್ಲಮ್ಮ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ರೊಟ್ಟಯ್ಯನವರ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜ ಬಿಲ್ಲಶಿವಣ್ಣವರ, ಪ್ರಮುಖರಾದ ಮಹಾಂತೇಶ ಉಪ್ಪಿನ, ಶಂಕರ ಕರಿಕಟ್ಟಿ, ಜೈನುಲಸಾಬ್ ಕಿತ್ತೂರ, ವಿಠ್ಠಲ ಪಿಸೆ, ಮಲ್ಲಿಕಾರ್ಜುನ ಹುಂಬಿ, ಬಸವರಾಜ ದೇಗಾವಿ, ಅಮೀರ ಹಾದಿಮನಿ. ಎನ್.ಸಿ.ಯರಗಂಬಳಿಮಠ, ಸುನಿಲ ವರ್ಣೇಕರ್, ಶಂಕ್ರಯ್ಯ ಗುಡ್ಡದಮಠ, ಮಾರುತಿ ತೋರ್ಗಲ ಈರಪ್ಪ ನೀಲಪ್ಪನವರ, ನಾಗನಗೌಡ ಪಾಟೀಲ, ಈರಪ್ಪ ಕಲಬಾವಿ, ಮಂಜುನಾಥ ತಹಶೀಲ್ದಾರ. ಯಾಸಿನ್ ಕಿತ್ತೂರ, ಮಹೇಶ ರೇವಯ್ಯನವರ ಉಪಸ್ಥಿತರಿದ್ದರು. ಸೆದೆಪ್ಪ ಗುಗ್ಗರಿ, ನಿರೂಪಿಸಿದರು ಸಚಿನ ಹುಂಬಿ ವಂದಿಸಿದರು.
ವರದಿ :ದುಂಡಪ್ಪ ಹೂಲಿ




