ವಿಜಯಪುರ: ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ನಿಡಗುಂದಿ ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರು ಕಂದಾಯ ಇಲಾಖೆ ವೈದ್ಯಕೀಯ ಅಧಿಕಾರಿಗಳು ಘೋಷಣಾ ವಾಕ್ಯವನ್ನು ಕೂಗುವುದರೊಂದಿಗೆ ಪ್ರಮುಖ ಬೀದಿ ಬೀದಿಯಲ್ಲಿ ಜಾತ ಕಾರ್ಯಕ್ರಮ ಜರಗಿತು.

ಜಿ ವಿ ವಿ ಎಸ್ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡುಗುಂದಿಯ ದಂಡಾಧಿಕಾರಿಯಾದ ಎ ಡಿ ಅಮರವಾಡಗಿ ಮಾತನಾಡಿ
ಮಾದಕ ವ್ಯಸನಕ್ಕೆ ಹೆಚ್ಚಿನ ಮಟ್ಟಿಗೆ ವಿದ್ಯಾರ್ಥಿಗಳು ಒಳಗಾಗುತ್ತಾರೆ.
ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಪ್ರಜೆಗಳು, ಹಿರಿಯರ ಮಾತುಗಳನ್ನು ತಪ್ಪದೇ ಕೇಳಬೇಕು, ಉತ್ತಮವಾದ ಆರೋಗ್ಯವನ್ನು ರೂಪಿಸಿಕೊಳ್ಳಬೇಕು,
ಮಾದಕ ವಸ್ತುಗಳನ್ನು ಯಾರು ಕೂಡ ಸೇವಿಸಬಾರದು ಊರಲ್ಲಿ ಮನೆಯಲ್ಲಿ ಎಲ್ಲರಿಗೂ ಮಾದಕ ವಸ್ತುಗಳಿಂದ ದೂರವಿರಿ ಎಂದು ಸಲಹೆಯನ್ನು ನೀಡಬೇಕು.
ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿ ವಿ ವಿ ಎಸ್ ಸಂಸ್ಥೆಯ ಸಂಸ್ಥಾಪಕರಾದ ಸಿದ್ದಣ್ಣ ನಾಗಠಾಣ್, ಸರ್ಕಾರಿ ಚಿಕ್ಕ ಮಕ್ಕಳ ವೈದ್ಯರಾದ ರವಿ ಭಜಂತ್ರಿ, ಜೆ ಜೆ ವಾರಿ, ಉಪನ್ಯಾಶಕರು, ಜಿ ವಿ ಎಸ್, ಸಿದ್ದಣ್ಣ ನಾಗಠಾಣ್ ಜಿ ವಿ ವಿ ಎಸ್ ಸಂಸ್ಥೆಯ ಅಧ್ಯಕ್ಷರು, ಶಿವಾನಂದ್ ಪಾಟೀಲ್ ಪಿಎಸ್ಐ ನಿಡಗುಂದಿ, ಶರಣಬಸು ಬಿರಾದಾರ್ ಸಹಾಯಕ ನಿರ್ದೇಶಕರು ಪಟ್ಟಣ ಪಂಚಾಯಿತಿ. ಮತ್ತಿದ್ದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ:ಅಲಿ ಮಕಾನದಾರ




