ಬೆಂಗಳೂರು : ಹಿಂದೂ ಎಂಬ ಪದವು ವಿಲಕ್ಷಣ ಪದವಾಗಿದೆ ಮತ್ತು ಹಿಂದೂ ಧರ್ಮ ವನ್ನು ಪ್ರಪಂಚದಲ್ಲಿ ಉಳಿದಿರುವ ಅತ್ಯಂತ ಹಳೆಯ ಧರ್ಮವೆಂದು ಕರೆಯುತ್ತೇವೆ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಹೇಳಿದರು.
ಅವರು ಪ್ರವೀಣ್ ಭಾಯ್ ತೊಗಾಡಿಯಾ ಅವರ ಹುಟ್ಟು ಹಬ್ಬ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರ ಮಹಾಮಂಗಳಾರತಿ ಜರುಗುವುದು ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆದಂತೆ ನಮ್ಮ ಧರ್ಮದ ಆರಾಧ್ಯ ದೈವ ಶ್ರೀ ರಾಮನ ಭಾವಚಿತ್ರಕ್ಕೆ ಪೂಜಾ ಪುನಸ್ಕಾರ ಸಲ್ಲಿಸಿ ಜ್ಯೋತಿ ಬೆಳಗಿಸಿ ದರ್ಶನ ಪಡೆದು ನಂತರ ಬೆಂಗಳೂರು ನಗರದಿಂದ 18ಕಿಲೋ ಮೀಟರ್ ದೂರದಲ್ಲಿರುವ ಮಾತೃ ಶ್ರೀ ಬುದ್ಧಿಮಾಂದ್ಯ ಅನಾತ ಮಕ್ಕಳ ಆಶ್ರಮಕ್ಕೆ ತೆರಳಿ ಬುದ್ಧಿಮಾಂದ್ಯ ಮಕ್ಕಳೊಂದಿಗೆ ತಮ್ಮ ಹಿಂದೂ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಭಾಯ್ ತೊಗಾಡಿಯಾ ಅವರ ಹುಟ್ಟು ಹಬ್ಬವನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ತುಪ್ಪದ ದೀಪ ಹಚ್ಚಿ ಕೆಕ್ ಕತ್ತರಿಸಿ ಆಚರಣೆ ಮಾಡಲಾಯಿತು ನಂತರ ಸಾಮೂಹಿಕವಾಗಿ ಮಕ್ಕಳಿಗೆ ಊಟಾ ನೀಡಿ ನಂತರ ವಿ. ಆನಂದ್ ಮಾದ್ಯಮ ದವರಿಗೆ ತಿಳಿಸಿದ್ದಾರೆ.
ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಹಾಗೂ ಯುವ ಹಿಂದೂ ನಾಯಕ ಸೇಲ್ವ್ ರಾಜು, ಪ್ರತಾಪ್ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಡಾ. ಪ್ರವೀಣ್ ಭಾಯ್ ತೊಗಾಡಿಯಾ ಅವರಿಗೆ ಶುಭ ಕೋರಿದರು.
ವರದಿ : ಅಯ್ಯಣ್ಣ ಮಾಸ್ಟರ್




