Ad imageAd image

ಸೈಯದ್ ಕನ್ನಡ ನಜೀರ್ ಅವರಿಗೆ ಅಂತರ ರಾಷ್ಟ್ರೀಯ ಶಾಂತಿ ಪುರಸ್ಕೃತ ಪ್ರಶಸ್ತಿ.

Bharath Vaibhav
ಸೈಯದ್ ಕನ್ನಡ ನಜೀರ್ ಅವರಿಗೆ ಅಂತರ ರಾಷ್ಟ್ರೀಯ ಶಾಂತಿ ಪುರಸ್ಕೃತ ಪ್ರಶಸ್ತಿ.
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರ:- ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯಾಧ್ಯಕ್ಷರು ಸಮಾಜ ಸೇವಕರಾದ ಸೈಯದ್ ಕನ್ನಡ ನಜೀರ್ ಅವರಿಗೆ ಅಂತರಾಷ್ಟ್ರೀಯ ಶಾಂತಿ ಪುರಸ್ಕೃತರ ಪ್ರಶಸ್ತಿಗೆ ಆಯ್ಕೆಯಾಗಿರುವದು ಹೆಮ್ಮೆಯ ವಿಷಯ. ಸೈಯದ್ ಕನ್ನಡ ನಜೀರ್ ಅವರು ವೀರ ರಾಣಿ ಕಿತ್ತೂರ ಚನ್ನಮ್ಮನ ಹೆಸರನಲ್ಲಿ ಕನ್ನಡ ಪರ ಸಂಘಟನೆ ಸ್ಥಾಪನೆ ಮಾಡಿ ಹಲವು ವರ್ಷಗಳಿಂದ ಕನ್ನಡ ಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದರ ಜೋತೆಗೆ ಸಾಕಷ್ಟು ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.

ದುಬೈ ಸಂಯುಕ್ತ ಅರಬ್ ಸಂಸ್ಥಾನ ದೇಶದ ಆರ್ಥಿಕ ರಾಜಧಾನಿ ದುಬೈಯಲ್ಲಿ ನಡೆದ ಖ್ಯಾತ ಅಂತರ ರಾಷ್ಟ್ರೀಯ ಸಂಘಟನೆ ಹಿಂದೂ.ಮುಸ್ಲಿಂ. ಕ್ರಿಶ್ಚಿಯನ್ ಯುನೈಟೆಡ್ ಇದರ ಹದಿನೈದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಂತರ ರಾಷ್ಟ್ರೀಯ ಶಾಂತಿ ಪ್ರಶಸ್ತಿ

ಪ್ರದಾನ ಸಮಾರಂಭದಲ್ಲಿ ಖ್ಯಾತ ಸಮಾಜಸೇವಕರು ಕನ್ನಡ ಪರ ಹೋರಾಟಗಾರರು ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯಾಧ್ಯಕ್ಷರಾದ ಸೈಯದ್ ಕನ್ನಡ ನಜೀರ್ ಅವರಿಗೆ ಅಂತರ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದುಬೈ ಯ ಕರಾಮಾದಲ್ಲಿನ ಪಂಚತಾರ ಹೋಟೆಲ್ ಪಾರ್ಕ್ ರೆಜೆಸ್ ನಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ಇಪ್ಪತ್ತರಡು ದೇಶಗಳ ವಿವಿಧ ಪ್ರತಿನಿಧಿಗಳಂದಿಗೆ ಭಾರತದ ನಾಲ್ವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ವರದಿ :-ಬಸವರಾಜ ,ಭೀಮರಾಣಿ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!