ಸಿಂಧನೂರು: ಮಾರ್ಚ್ 26ರಂದು ಕರ್ನಾಟಕ ರಕ್ಷಣಾ ಸೇನೆ ತಾಲೂಕ ಘಟಕ ವತಿಯಿಂದ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು ಎಂದು ತಾಲೂಕ ಅಧ್ಯಕ್ಷ ಅಂಬಿರಾಜ್ ಮ್ಯಾಕಲ್ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಫಾತಿಮಾ ಹುಸೇನ್ ಸಾಬ್ ಅಧ್ಯಕ್ಷರು ಕರ್ನಾಟಕ ರಕ್ಷಣಾ ಸೇನೆ ಮಹಿಳಾ ಘಟಕ ವಹಿಸಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಡಾ. ಸವಿತಾ ಎನ್, ಮಾಲಿ ಪಾಟೀಲ್ ಮಕ್ಕಳ ತಜ್ಞರು ಚೇತನ್ ಆಸ್ಪತ್ರೆ ಸಿಂಧನೂರು ಉದ್ಘಾಟಿಸಿದರು ಹಾಗೂ ಶ್ರೀಮತಿ ದ್ರಾಕ್ಷಾಯಿಣಿ ಬಾದರ್ಲಿ ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಗೋಮರ್ಷಿ ಶ್ರೀಮತಿ ವಿಜಯರಾಣಿ ಎಂ ಎಂ ಎಸ್ ಮಹಿಳಾ ಸಂಘ ಸಿರವಾರ ಜ್ಯೋತಿ ಬೆಳಗಿಸಿ ಮಾತನಾಡಿ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯಿಂದ ಈ ಒಂದು ಕಾರ್ಯಕ್ರಮ ಆಯೋಜಿಸಿದ್ದು ಮಹಿಳೆಯರ ಘನತೆ ಮತ್ತು ಕೊಡುಗೆ ನೆನೆಸಲು ಈ ವೇದಿಕೆಯಾಗಿದ್ದು ಮಹಿಳೆಯರು ಕುಟುಂಬದ ಶಕ್ತಿಯಾಗಿ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದು ಮಾತ್ರವಲ್ಲದೆ ಸ್ವಾವಲಂಬಿ ಜೀವನ ನಡೆಸುವ ಮೂಲಕ ದೇಶದ ಪ್ರಗತಿಗೆ ಮಹತ್ತರವಾದ ಕೊಡುಗೆ ನೀಡುತ್ತಿದ್ದಾರೆ.
ಹಾಗೆ ನೋಡಿದರೆ ಪ್ರತಿದಿನವೂ ಮಹಿಳಾ ದಿನವೇ ಒಂದೇ ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ ಏಕೆಂದರೆ ಮನೆ ಕುಟುಂಬ ಕಚೇರಿ ಕೆಲಸ ಹಾಗೆ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅವರದ್ದೆ ಆದ ಪಾತ್ರವಿದೆ ಎಂದರು.
ಇದೇ ವೇಳೆ ಗುರುರಾಜ ಮುಕ್ಕುಂದ ಉತ್ತರ ಕರ್ನಾಟದ ವಿಭಾಗೀಯ ಅಧ್ಯಕ್ಷರು ತಾಲೂಕ ಅಧ್ಯಕ್ಷ ಅಂಬಿರಾಜ್ ಮ್ಯಾಕಲ್. ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷ ದುರುಗೇಶ್ ಬಾಲಿ. ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗಾಗಿ ಅನೇಕ ಸಲಹೆ ಸಹಕಾರಗಳನ್ನು ನೀಡಿದರು.
ಈ ಸಂದರ್ಭದಲ್ಲಿ, ಮಹಾನಂದ ಅಮ್ಮ ಜನಸೇವೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು. ಶಿವಮ್ಮ ಕರವೇ ಅಧ್ಯಕ್ಷರು. ತ್ರಿವೇಣಿ ಭಂಡಾರಿ ಆರೋಗ್ಯ ಇಲಾಖೆ. ಸುಜಾತ ಹಿರೇಮಠ ಕಾರುಣ್ಯ ಶ್ರಮ. ಜಮುನ ಅಮ್ಮ ಮುಕ್ಕುಂದ. ಹುಲಿಗೆಮ್ಮ. ಭವಾನಿ. ವಿಜಯಕುಮಾರ್ ಅಂಬಾಮಠ. ಮೈನುದ್ದೀನ್ ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ