ಬಸವನ ಬಾಗೇವಾಡಿ : ವಿಜಯಪುರ ಜಿಲ್ಲೆಯ ನಿಡಗುಂದಿ ಹಾಗೂ ಬಸವನ ಬಾಗೇವಾಡಿ ಅವಳಿ ತಾಲೂಕಿಗೆ ಸಂಬಂಧಿಸಿದಂತೆ ಆಲಮಟ್ಟಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಯೋಜನಾ ಶಾಖೆ ಆಲಮಟ್ಟಿ. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಲಮಟ್ಟಿ ಸಮುದಾಯ ಭವನದಲ್ಲಿ ಮಹಿಳೆಯರ ಆರೋಗ್ಯ ಜೀವನ ಮತ್ತು ರಕ್ತ ಹೀನತೆಯ ಸಮಸ್ಯೆಗಳಿಗೆ ಪೌಷ್ಟಿಕಾಂಶದ ಮೌಲ್ಯಗಳ ಕುರಿತು ಉಪನ್ಯಾಸ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರು ಮಾನ್ಯ ಶ್ರೀ ಬಸವರಾಜ್ ಡಿ. ಮುಖ್ಯ ಅಭಿಯಂತರರು. ಹಾಗೂ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ದಳವಾಯಿ ಅಧ್ಯಕ್ಷರು ನೌಕರರ ಸಂಘ ಆಲಮಟ್ಟಿ. ಮತ್ತು ಕಾರ್ಯಕ್ರಮದ ಉಪಯುಕ್ತ ಉಪನ್ಯಾಸವನ್ನು ಶ್ರೀಮತಿ ಡಾಕ್ಟರ್ ಜ್ಯೋತಿ ಲಕ್ಷ್ಮಿ ಪಾಟೀಲ್ ಮುಖ್ಯ ವೈದ್ಯಾಧಿಕಾರಿಗಳು ಶಿವಮೊಗ್ಗ ಜಿಲ್ಲೆ.
ಮಹಿಳೆಯರಲ್ಲಿ ರಕ್ತಹೀನತೆಯ ಲಕ್ಷಣಗಳು ಮತ್ತು ಮೂಲ ಕಾರಣಗಳ ಬಗ್ಗೆ ಪೌಷ್ಟಿಕಾಂಶಗಳನ್ನು ಹೇಗೆ ತೆಗೆದು ಕೊಳ್ಳುವ ಕುರಿತು ತಿಳುವಳಿಕೆಯನ್ನು ಡಾ|| ಜ್ಯೋತಿ ಲಕ್ಷ್ಮೀ ಪಾಟೀಲರ ತಮ್ಮ ಉಪನ್ಯಾಸದಲ್ಲಿ ಜನರಿಗೆ ಮಾಹಿತ ನೀಡಿದರು.
ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಹನಾ ಬಸವರಾಜ್, ಶ್ರೀಮತಿ ಸುವರ್ಣ ವ್ಹಿ. ಹಿರೇಗೌಡರ್, ಶ್ರೀಮತಿ ಉಷಾ ಗುಂಡ, ಶ್ರೀಮತಿ ಪುಷ್ಪ ಗೋವಿಂದ ರಾಥೋಡ್, ಶ್ರೀಮತಿ ಮಹೇಶ್ವರಿ ಜಿ ಪಾಟೀಲ್, ಮತ್ತು ಗಣ ಉಪಸ್ಥಿತಿರು ಶ್ರೀ ಮಹೇಶ್ ಕೆ ಪಾಟೀಲ್ ಗೌರವಾಧ್ಯಕ್ಷರು ನೌಕರರ ಸಂಘ ಹಾಗೂ ವಲಯ ಅರಣ್ಯ ಅಧಿಕಾರಿಗಳ ಆಲಮಟ್ಟಿ, ಬಿಜಿ ಬನ್ನೂರ, ಮಹಾಂತೇಶ್ ಒಡೆಯರ್, ವೈ ಎಂ ಪಾತ್ರೋಟ, ಶ್ರೀರಕ್ಷ ಎಂ ಆರ್, ವಿಜಯಲಕ್ಷ್ಮಿ ರೆಡ್ಡಿ ಹಾಗೂ ಇನ್ನಿತರರು ಭಾಗವಹಿಸಿದ್ದರು.
ವರದಿ: ಕೃಷ್ಣಾ ಎಚ್, ರಾಠೋಡ