Ad imageAd image

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವ ಗ್ರಾಹಕರ ದಿನಾಚರಣೆ

Bharath Vaibhav
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವ ಗ್ರಾಹಕರ ದಿನಾಚರಣೆ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಛೇರಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ ಪ್ರಭಾರಿ ನ್ಯಾಯಾಧೀಶರಾದ ಈರಪ್ಪ ಢವಳೇಶ್ವರ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಮಹಿಳೆಯರು ಕುಟುಂಬದ ನಿರ್ವಹಣೆಯಲ್ಲಿ ತ್ಯಾಗ ಮನೋಭಾವದಿಂದ ನಿರ್ವಹಿಸುತ್ತಾ ಬಂದಿದ್ದು ನಾವೆಲ್ಲರೂ ಅವರ ತ್ಯಾಗವನ್ನು ಮನಗಂಡು ಗೌರವಿಸಬೇಕಾಗಿದೆ.

ಗ್ರಾಹಕರು ತಮಗೆ ಕುಂದುಕೊರತೆಗಳಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
1983 ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗಿದೆ.

ಗ್ರಾಹಕರೆಂದರೆ ವ್ಯವಹಾರದಲ್ಲಿ ಬಾಗಿಯಾಗುವರಾಗಿದ್ದು, ಕೊಳ್ಳುವ ಮತ್ತು ಮಾರುವವರ ಮದ್ಯೆ ಸಮಸ್ಯೆಯುಂಟಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹರಿಸಿಕೊಳ್ಳಬಹುದೆಂದರು.
ಜಂಟಿ ಕಾರ್ಯದರ್ಶಿ ಮಂಗಳ ಅವರು ಮಾತನಾಡಿ ಮಹಿಳೆಯರ ಸಂರಕ್ಷಣೆಗಾಗಿ ಹಲವಾರು ಕಾನೂನುಗಳಿವೆ. ಆದರೆ ದುರುಪಯೋಗ ಮಾಡಿಕೊಳ್ಳಬಾರದು.

ಕುಟುಂಬದಲ್ಲಿನ ಪರಿಸ್ಥಿತಿಯನ್ನು ಕಂಡುಕೊಂಡು ಹಕ್ಕು ಚಲಾಯಿಸುವುದು ಉತ್ತಮವೆಂದರು.
ವಕೀಲರಾದ ಸ್ವರೋಜ ಅವರು ಮಾತನಾಡಿ ಪೋಷಕರು ಹೆಣ್ಣು ಗಂಡೆಂಬ ಬೇಧ ಬಾವ ತೋರದೇ ಬಾಲ್ಯದಿಂದಲೇ ಮಕ್ಕಳ ನಡತೆ, ಸಮಾಜದಲ್ಲಿ ಅವರ ಪಾತ್ರದ ಬಗ್ಗೆ ತಿಳಿಸುವಂತಹ ಕಾರ್ಯ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಜ್, ನಗರಸಭೆಯ ಅಮರೇಶ, ಸಿ.ಡಿ.ಪಿ.ಓ ಪ್ರದೀಪ್, ವಕೀಲರ ಸಂಘದ ಉಪಾಧ್ಯಕ್ಷ ಎಮ್.ಷರೀಪ್‌ಸಾಬ್, ಕಾರ್ಯದರ್ಶಿ ಶಿವಕುಮಾರ್.ಎಮ್, ಪ್ಯಾನಲ್ ವಕೀಲರಾದ ಎನ್.ಅಬ್ದುಲ್‌ಸಾಬ್, ಟಿ.ವೆಂಕಟೇಶ್‌ನಾಯ್ಕ್, ಮಲ್ಲಿಗೌಡ ಇನ್ನಿತರ ವಕೀಲರು ಹಾಗೂ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!