ಮೊಳಕಾಲ್ಮೂರು: ಪಟ್ಟಣದ ಪ್ರತಿಷ್ಠಿತ ಶಾಲೆ ಎನಿಸಿಕೊಂಡಿರುವ ಸರ್ವೋದಯ ಮತ್ತು ಶ್ರೀ ಚೈತನ್ಯ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 21.06.2025 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮೊಳಕಾಲ್ಮುರಿನ ಪತಂಜಲಿ ಯೋಗ ಸಮಿತಿಯ ಸದಸ್ಯರಾದ ವಿಠ್ಠಲ್, ಮಂಜುನಾಥ್, ಹರಿಕೃಷ್ಣ, ಶ್ರೀಕಾಂತ್, ಪ್ರಸಿದ್ಧ ನೃತ್ಯ ಶಿಕ್ಷಕರಾದ ಮಂಜುನಾಥ್ ಮತ್ತು ಸರ್ವೋದಯ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಎಲ್ಲಾ ಮಕ್ಕಳು ಅಂತರಾಷ್ಟ್ರೀಯಯೋಗ ದಿನಾಚರಣೆಯಲ್ಲಿ ಸಂತಸದಿಂದ ಪಾಲ್ಗೊಂಡಿದ್ದು , ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.





