ತುರುವೇಕೆರೆ: ಪಟ್ಟಣದ ಶಾರದಾ ಮಹಿಳಾ ಸಮಾಜದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಯೋಗಶಿಕ್ಷಕಿ ಗೌರಿರಂಗನಾಥ್ ಮಾತನಾಡಿ, ಯೋಗಕ್ಕೆ ಪ್ರಾಚೀನ ಇತಿಹಾಸವಿದೆ. ದೈಹಿಕ, ಮಾನಸಿಕ ಆರೋಗ್ಯ ಮಾತ್ರವಲ್ಲದೆ ಆಧ್ಯಾತ್ಮಿಕ ಅನುಭವವನ್ನು ಯೋಗ ನೀಡುತ್ತದೆ. ಧ್ಯಾನ, ಪ್ರಾಣಾಯಾಮ ಸೇರಿದಂತೆ ಯೋಗದ ಸರಳ ಆಸನಗಳನ್ನು ಪ್ರತಿನಿತ್ಯ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಹೆಚ್ಚು ಶಾಂತಿ, ನೆಮ್ಮದಿ ಉಂಟು ಮಾಡುತ್ತದೆ, ವ್ಯಕ್ತಿಯ ಕೋಪವನ್ನು ಕಡಿಮೆ ಮಾಡಿ ತಾಳ್ಮೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು.

ಶಾರದಾ ಮಹಿಳಾ ಸಮಾಜದ ಪದಾಧಿಕಾರಿಗಳು, ಸದಸ್ಯರು ಯೋಗಶಿಕ್ಷಕಿ ಗೌರಿರಂಗನಾಥ್ ಹೇಳಿಕೊಟ್ಟ ಯೋಗಭಂಗಿಗಳು, ಆಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು.
ವರದಿ: ಗಿರೀಶ್ ಕೆ ಭಟ್




