ನಿಪ್ಪಾಣಿ:ಮದುವೆಯ ಈ ಬಂಧ ಅನುರಾಗದ ಅನುಬಂಧ ಎನ್ನುವಂತೆ ಜಂಜಾಟದ ಬದುಕಿನಲ್ಲಿಂದು ವಧುವರ ಪರಿಚಯ ಮೇಳಗಳು ಸಮಾಜಕ್ಕೆ ಮಾದರಿಯಾಗುತ್ತಿವೆ ಇದಕ್ಕೆ ಉತ್ತಮ ಉದಾಹರಣೆ. ಜಿಯೋ ಔರ್ ಜೀನೆ ದೋ ಸಂಘಟನೆ ಎಂದು ಚಿಕ್ಕೋಡಿಯ KLE ಕಾಲೇಜಿನ ಪ್ರಾಂಶುಪಾಲ ಡಾ. ಬಾಹುಬಲಿ ಅಕಿವಾಟೆ ತಿಳಿಸಿದರು. ಅವರು ನಿಪ್ಪಾಣಿ ತಾಲೂಕಿನ ಧರ್ಮನಗರಿ ಭೋಜ ಗ್ರಾಮದಲ್ಲಿ ಜಿಯೋ ಔರ್ ಜಿನೇದೋ ಸಂಘಟನೆ ಏರ್ಪಡಿಸಿದ್ದ ಜೈನ್ ಉಚಿತ ವಧು-ವರ ಪರಿಚಯ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶೀತಲ ಬಾಗೆ ಹಾಗೂ ವೇದಿಕೆಯಲ್ಲಿಯ ಗಣ್ಯರ ಉಪಸ್ಥಿತಿಯಲ್ಲಿ ಸದಸ್ಯ ರಮಿತ ಸದಲಗೆ ಸಸಿಗೆ ನೀರು ಹಾಕುವುದರ ಮೂಲಕ ವಧುವರ ಪರಿಚಯ ಮೇಳ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ಶಾಂತಿನಾಥ್ ಶೆಟ್ಟಿ ರಮೇಶ ಪಾಟೀಲ ಸಂತೋಷ್ ಕಾಕಡೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜನಿಕಾಂತ್ ಚೌಗುಲೆ ಮಾತನಾಡಿ ಜೈನ್ ಸಮಾಜದಲ್ಲಿಂದು ವಧು ವರರ ಸಮಸ್ಯೆಯಿಂದಾಗಿ ಪಕ್ಕದಲ್ಲಿಯೇ ವಧು ಇದ್ದರೂ ಗ್ರಾಮವನ್ನೇ ಹುಡುಕುವಂತಹ ಪರಿಸ್ಥಿತಿ ಬಂದಿರುವಾಗ ಜಿಯೋ ಔರ್ ಜಿನೇ ದೋ ಅಂತಹ ಸಂಘಟನೆಗಳು ಮುಂದೆ ಬರಬೇಕಾಗಿದೆ.
ಸಂಪೂರ್ಣ ಉಚಿತ ವಧುವರ ಸಮ್ಮೇಳನ ಹಮ್ಮಿಕೊಂಡ ಪರಿಚಯ ಮೇಳದಲ್ಲಿಂದು ದಾಖಲೆ 400ಕ್ಕೂ ಅಧಿಕ ವಧು-ವರರು ತಮ್ಮ ಹೆಸರು ನೋಂದಾಯಿಸಿಕೊಂಡು ವಧುವರರ ಮೇಳ ಯಶಸ್ವಿ ಯಾಗಿಸಿದ್ದು ಶ್ಲಾಘನೀಯವೆಂದರು. . ಸಮಾರಂಭದಲ್ಲಿ ಶಿವಗೌಡ ಪಾಟೀಲ ಆನಂದ ಬಾಗೆ ಅಮಿತ ಮುರಾಬಟ್ಟೆ ಶೀತಲ್ ದೇಸಾಯಿ ವಿದ್ಯಾಸಾಗರ ಪಾಟೀಲ್ ಉದಯ ಕೇಸ್ತೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ರವಿವಾರ ನಡೆದ ವಧು ವರರ ಮೇಳದಲ್ಲಿ ಕರ್ನಾಟಕ ಮಹಾರಾಷ್ಟ್ರದಿಂದ 500ಕ್ಕೂ ಅಧಿಕ ವಧು-ವರ ಪಾಲಕರು ಪಾಲ್ಗೊಂಡಿದ್ದರು. ಶೀತಲ ಬಾಗೆ ಸ್ವಾಗತಿಸಿದರು.ಸಾಧನಾ ಬಾಗೆ ನಿರೂಪಿಸಿ ವಂದಿಸಿದರು.
ವರದಿ:ಮಹಾವೀರ ಚಿಂಚಣೆ




