ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ಕ್ಯಾಮೆರಾ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊರ್ವ ಸರ್ಕಾರಿ ಅಧಿಕಾರಿಯಿಂದ ಖತರ್ನಾಕ್ ಸ್ಕೆಚ್ ಹಾಕಲಾಗಿತ್ತು. ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಯ ತೇಜೋವಧೆಗೆ ಈ ಒಂದು ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಮಾಳ ಮಾರುತಿ ಪೊಲೀಸರಿಂದ ಟಿ.ವಿನೋದ ಎಂಬಾತನನ್ನು ಬಂಧಿಸಲಾಗಿದೆ.ಮಹಿಳಾ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೋರ್ವ ಅಧಿಕಾರಿ ಅಡ್ಡದಾರಿ ಹಿಡಿದಿದ್ದಾನೆ.
ಖಾಸಗಿ ವಿಡಿಯೋ ದುರ್ಬಳಕೆ ಮಾಡಿಕೊಳ್ಳಲು ಸ್ಕೆಚ್ ಹಾಕಿದ್ದಾನೆ. ಟಿ ವಿನೋದ್ ಎಂಬಾತನನ್ನು ಮಹಿಳಾ ಅಧಿಕಾರಿ ವರ್ಗಾವಣೆ ಮಾಡಿದ್ದರು. ಹಾಗಾಗಿ ಆತ ಸೇಡು ತೀರಿಸಿಕೊಳ್ಳಲು ಈ ರೀತಿ ಅಡ್ಡದಾರಿ ಹಿಡಿದಿದ್ದಾನೆ.
ಪೊಲೀಸರಿಂದ ವಿನೋದ್ ಮೊಬೈಲ್ ಪರಿಶೀಲನೆ ಆಗಿದ್ದು ಮಹಿಳಾ ಅಧಿಕಾರಿ ವಿರುದ್ಧ ನಕಲಿ ಪತ್ರಕರ್ತರನ್ನು ಛೂ ಬಿಟ್ಟಿದ್ದಾನೆ.
ಮಹಿಳಾ ಅಧಿಕಾರಿಗೆ ಹೆದರಿಸಿ ಹಣ ಲಪಟಾಯಿಸಲು ಪ್ಲಾನ್ ಮಾಡಿದ್ದಾರೆ. ಬಂದಲ್ಲಿ ಇಬ್ಬರಿಗೂ ಪಾಲು ಎಂದು ನಿರ್ಧಾರವಾಗಿತ್ತಂತೆ.
ನಕಲಿ ಪತ್ರಕರ್ತರು ಹಾಗೂ ವಿನೋದನೀಗೆ ಪಾಲು ಇತ್ತು ಮಹಿಳಾಧಿಕಾರಿ ಖಾಸಗಿ ದೃಶ್ಯವನ್ನು ಸಂಗ್ರಹಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಬಲ್ಬ್ ಹೋಲ್ಡರ್ ನಲ್ಲಿ 8 ರಹಸ್ಯ ಕ್ಯಾಮೆರಾ ಗಳನ್ನು ಇಟ್ಟಿದ್ದರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಇದೀಗ ಬಂಧಿತ ಆರೋಪಿಗಳನ್ನ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಏನಿದು ಘಟನೆ
ನಗರದಲ್ಲಿ ವಾಸವಾಗಿರುವ ಮಹಿಳಾ ಅಧಿಕಾರಿಯೊಬ್ಬರ ಮನೆಗೆ ಸ್ನೇಹಿತರೊಬ್ಬರು ಆಗಾಗ ಬರುತ್ತಿದ್ದರು. ಪ್ರತಿ ದಿನ ಕಚೇರಿಗೆ ಹೋಗುವ ಮುನ್ನ ಮನೆಯ ಬೀಗದ ಕೈಯನ್ನು ಕಿಟಕಿಯಲ್ಲೇ ಇಟ್ಟು ಹೋಗುತ್ತಿದ್ದರು. ಮನೆಯ ಕೆಲಸಗಾರನೊಬ್ಬ ಈ ವಿಷಯವನ್ನು ಯೂಟ್ಯೂಬರ್‌ಗಳಿಗೆ ತಿಳಿಸಿದ್ದ.
ಹೊಂಚುಹಾಕಿದ ಮೂವರೂ ಯೂಟ್ಯೂಬರ್‌ಗಳು ಅಧಿಕಾರಿ ಮನೆ ಪ್ರವೇಶಿಸಿ, 11 ಕಡೆ ಬಲ್ಟ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟಿದ್ದರು.
ಮಹಿಳಾ ಅಧಿಕಾರಿ ತಮ್ಮ ಸ್ನೇಹಿತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದರು. ಅವುಗಳನ್ನು ತೋರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು.




