Ad imageAd image

ಕರ್ನಾಟಕ ರಾಜ್ಯೋತ್ಸವ ಆಚರಿಸಲು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

Bharath Vaibhav
ಕರ್ನಾಟಕ ರಾಜ್ಯೋತ್ಸವ ಆಚರಿಸಲು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
WhatsApp Group Join Now
Telegram Group Join Now

ಕರ್ನಾಟಕ ಸಂಗ್ರಾಮ ಸೇನೆಯಿಂದ ಪ್ರತೀ ವರ್ಷವೂ ನವೆಂಬರ್ ಒಂದರಂದು ನಡೆಯುವ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಶೇಷವಾಗಿ ಆಚರಿಸುವ ನಿಮಿತ್ತವಾಗಿ, ಕಂಕಣ ಕಟ್ಟುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು
ಕಲಘಟಗಿ ಪಟ್ಟಣದ ಹನ್ನೆರಡು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಸರ್ವರಿಗೂ ಆಮಂತ್ರಣ ಪತ್ರಿಕೆಯನ್ನು ಪರಮ ಪೂಜ್ಯ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ, ಬಿಡುಗಡೆ ಗೊಳಿಸಿ ಶ್ರೀಗಳು ಆಶೀರ್ವಚನ ಮುಖಾಂತರ ಕರ್ನಾಟಕ ಸಂಗ್ರಾಮ ಸೇನೆಯು ತಾಲೂಕಿನಲ್ಲಿ ಉತ್ತಮ ರೀತಿ ಕೆಲಸ ಮಾಡುತ್ತದೆ ಸದಾಕಾಲ ನಿಮಗೆ ನಮ್ಮ ಆಶೀರ್ವಾದ ಇದ್ದೇ ಇರುತ್ತದೆ ಎಂದರು ಜಾನಪದ ಕಲಾವಿದರಾದ ಎಂ ಆರ್ ತೋಟಗಂಟಿ ಮಾತನಾಡಿ ಕಲಘಟಗಿ ಕನ್ನಡವೆಂದರೆ ನೆನಪಾಗುವುದೇ ಸಾತಪ್ಪ ಕುಂಕುರ್ ಅವರ ನೇತೃತ್ವದ ಕರ್ನಾಟಕ ಸಂಗ್ರಾಮ ಸೇನೆ ತಾಲೂಕಿನಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಾ ಇಡೀ ರಾಜ್ಯದಲ್ಲಿ ಕನ್ನಡ ನಾಡು ಬಗ್ಗೆ ದಿನನಿತ್ಯ ಕಾರ್ಯ ರೂಪದಲ್ಲಿರುವ ಸಂಘಟನೆ ಆಗಿರುತ್ತದೆ ನಿಮ್ಮ ಸಂಘಟನೆಗೆ ಸದಾ ಕಾಲ ನಮ್ಮ ಬೆಂಬಲ ಇರುತ್ತದೆ

ನಮ್ಮ ತಾಲೂಕಿನ ಎಲ್ಲ ಹಿರಿಯರ ಬೆಂಬಲ ನಿಮಗಿರುತ್ತದೆ ಎಂದರುಹಾಗೂ ಮಕ್ಕಳ ಜಾನಪದ ಪರಿಷತ್ತಿನ ಕಲಘಟಗಿ ತಾಲೂಕಾ ಅಧ್ಯಕ್ಷರಾದ ಸೊಮಲಿಂಗ ಒಡೆಯರ್, ಹಿರಿಯ ಶಿಕ್ಷಕರಾದ ಎಚ್ ಎನ್ ಸುಣಗಡ್, ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಸಾತಪ್ಪ ಕುಂಕೂರ ಉಪಾಧ್ಯಕ್ಷ ಮಂಜುನಾಥ್ ನಂದಿಗಟ್ಟಿ ಪ್ರಧಾನ ಕಾರ್ಯದರ್ಶಿ ಶಿವು ವಾಲ್ಮೀಕಿ ಕಲ್ಮೇಶ, ಹನುಮಣ್ಣವರ ಪ್ರಭು ರಂಗಾಪುರ್ ಗಿರೀಶ್ ಮುಕ್ಕಲ್ ನಿತೀಶ್ ಪಾಟೀಲ್ ದತ್ತಾತ್ರೇ ಭಟ್ ಮಲ್ಲೇಶ್ ಮಿರ್ಜಿ ಸುಭಾಷ್ ಕಂಪ್ಲಿ ಕೊಪ್ಪ ಎಲ್ಲಪ್ಪ ಕಂಪ್ಲಿ ಕೊಪ್ಪ ನದೀಮ್ ಜಟ್ಟಿ ಇನ್ನು ಅನೇಕ ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು

ವರದಿ ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!