Ad imageAd image

ಅಕ್ರಮ ಸಕ್ರಮದಡಿ ಶಾಲೆಗಳ ಮಾನ್ಯತೆಗೆ ಅರ್ಜಿ ಆಹ್ವಾನ

Bharath Vaibhav
ಅಕ್ರಮ ಸಕ್ರಮದಡಿ ಶಾಲೆಗಳ ಮಾನ್ಯತೆಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಬೆಂಗಳೂರು: ಮಾನ್ಯತೆ ಪಡೆಯದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆಗಳ ಮಾನ್ಯತೆ ಅಥವಾ ನವೀಕರಣಕ್ಕೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈಗಲೂ ಸಕ್ರಮ ಮಾಡಿಕೊಳ್ಳದಿದ್ದರೆ ನೋಂದಣಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮಾನ್ಯತೆ ನವೀಕರಣ ಇಲ್ಲದೇ ಅನೇಕ ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿರುವ ರಾಜ್ಯದ ಅನೇಕ ಖಾಸಗಿ ಶಾಲೆಗಳನ್ನು ಸಕ್ರಮಗೊಳಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಖಾಸಗಿ ಶಾಲೆಗಳು ಕಾರ್ಯನಿರ್ವಹಿಸಲು ಮಾನ್ಯತೆ ಹೊಂದಿರಬೇಕು. ಕಾಲಕಾಲಕ್ಕೆ ಮಾನ್ಯತೆ ನವೀಕರಿಸಬೇಕು. ಮಾನ್ಯತೆ ನವೀಕರಿಸದೇ ಕಾರ್ಯನಿರ್ವಹಿಸುವ ಶಾಲೆಗಳು ಅಕ್ರಮ ಎಂದು ಪರಿಗಣಿಸಲಾಗುವುದು.

ಇಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸದರೆ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅಕ್ರಮ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಈಗಲೂ ಸಕ್ರಮ ಮಾಡಿಕೊಳ್ಳದಿದ್ದರೆ ನೋಂದಣಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ. 2023 -24 ನೇ ಸಾಲಿನಲ್ಲಿ ಮತ್ತು ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಮಾನ್ಯತೆ ನವೀಕರಿಸಿಕೊಳ್ಳದ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.

ಒಂದು ಬಾರಿಗೆ ಮಾತ್ರ ಮಾನ್ಯತೆ ನವೀಕರಣದ ಷರತ್ತು ವಿಧಿಸಿ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಈ ಅವಕಾಶ ಬಳಸಿಕೊಂಡು ಶಾಲೆ ಆಡಳಿತ ಮಂಡಳಿಗಳು ಬಾಕಿ ಇರುವ ಅವಧಿಗೆ ಘಟನೋತ್ತರ ಮಾನ್ಯತೆ ಪಡೆಯಲು ಕ್ರಮವಹಿಸುವಂತೆ ತಿಳಿಸಲಾಗಿದೆ.

ಈ ಅವಧಿಯ ನಂತರವೂ ಪ್ರಥಮ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳಿಗೆ ನೋಂದಣಿ ರದ್ದುಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಪಿಡಿಯನ್ನು ಮಾನ್ಯತೆ ನವೀಕರಣ ತಂತ್ರಾಂಶದ ಲಾಗಿನ್ ಪುಟದಲ್ಲಿ ಅಳವಡಿಸಲಾಗಿದೆ.

ಅರ್ಜಿ ಸಲ್ಲಿಕೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಸಮಸ್ಯೆಯನ್ನು ಇ-ಮೇಲ್(glaprimarycpi@mail.com) ಮೂಲಕ ಸಲ್ಲಿಸಬಹುದು.

ಏಪ್ರಿಲ್ 28 ರಿಂದ ಮೇ 13 ರವರೆಗೆ ಅರ್ಜಿ ಸಲ್ಲಿಸಲು ಸಮಯ ನೀಡಲಾಗಿದೆ. ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ಜೂನ್ 17 ಕೊನೆಯ ದಿನವಾಗಿದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!