ಜಕ್ಕನಾಯಕನಕೊಪ್ಪ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಭಾವಿಹಾಳ ಗ್ರಾ.ಪಂ ವ್ಯಾಪ್ತಿಯ ಜಕ್ಕನಾಯಕನಕೊಪ್ಪ ಗ್ರಾಮಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಡಿ.ಎಚ್.ಡಿ ಗುತ್ತಿಗೆದಾರ ಕಂಪನಿಯು ಇಲ್ಲಿನ ಕಚ್ಚಾವಸ್ತುಗಳನ್ನು ವಸ್ತುಗಳನ್ನು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಹೊಯ್ಯಲು ಬೇಕಾದ ಸಾಮಗ್ರಿಗಳನ್ನು ಹೊಯ್ಯಲು ಹಾಗೂ ಇಲ್ಲಿ ಪ್ಲಾಂಟ್ ಅನ್ನು ಸ್ಥಾಪಿಸಿ ಇಲ್ಲಿಂದಲೇ ದಿನನಿತ್ಯ ರಾಜ್ಯ ರಸ್ತೆಯ ಮೂಲಕ ನಿಮಿಷಕ್ಕೆ ಒಂದರಂತೆ ಕಲ್ಲುಗಳು ತುಂಬಿದ ಟಿಪ್ಪರ್ ಗಳು ಒದ್ದಾಡಿ ಈ ರಸ್ತೆಯನ್ನು ಹಾಳು ಮಾಡಿದ್ದಾರೆ.
ಇದರ ಜೊತೆಗೆ ದಿನನಿತ್ಯ ಕಲ್ಲು ತುಂಬಿದ ಟಿಪ್ಪರ್ ಗಳು ಸಂಚಾರ ಮಾಡುವಾಗ ಕಲ್ಲುಗಳು ರಸ್ತೆ ಮೇಲೆ ಬೀಳುತ್ತಿರುವುದು, ಹಾಗೂ ವೇಗವಾಗಿ ಸಂಚಾರ ಮಾಡುವುದರಿಂದ ಮಕ್ಕಳಿಗೆ ಹಾಗೂ ದನಕರುಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಈ ಭಾಗದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆಯಂತೆ. ಆದ್ದರಿಂದ ಇಂದು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಜಕ್ಕನಾಯಕನಕೊಪ್ಪ ಗ್ರಾಮದ ಜನತೆಯ ಅಭಿಪ್ರಾಯ ಸಂಗ್ರಹ ಮಾಡಿ ಸಮಗ್ರವಾಗಿ ವರದಿ ತಯಾರಿಸಿ ಡಿ.ಎಚ್.ಡಿ ಕಂಪೆನಿಯವರನ್ನು ಸಂಪರ್ಕ ಮಾಡಿ ಈ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.
ವರದಿ: ಶ್ರೀ ಬಸವರಾಜು