ಹೈದರಾಬಾದ: ಇಶಾನ್ ಕಿಶನ್ ಬಿರುಸಿನ ಶತಕದ ನೆರವಿನಿಂದ ಸನ್ ರೈಸ್ ಹೈದರಾಬಾದ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 44 ರನ್ ಗಳಿಂದ ಜಯಗಳಿಸಿ ಶುಭಾರಂಭ ಮಾಡಿತು. ಪಂದ್ಯದ ಒಟ್ಟು 40 ಓವರುಗಳಲ್ಲಿ 528 ರನ್ ಗಳು ಹರಿದು ಬಂದವು.
ಬೃಹತ್ ಮೊತ್ತದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸ್ ಹೈದರಾಬಾದ್ ತಂಡ ನಿಗದಿತ 20 ೋವರುಗಳಲ್ಲಿ 6 ವಿಕೆಟ್ ಗೆ 286 ರನ್ ಗಳ ದಾಖಲೆಯ ಮೊತ್ತ ಕಲೆ ಹಾಕಿತು. ದೊಡ್ಡ ಮೊತ್ತ ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ಸಾಕಷ್ಟು ಪ್ರತಿರೋಧ ಒಡ್ಡಿ ಕೊನೆಗೆ ವೀರೋಚಿತ ಸೋಲು ಕಂಡಿತು.
ಸ್ಕೋರ್ ವಿವರ : ಸನ್ ರೈಸ್ ಹೈದರಾಬಾದ್ 20 ಓವರುಗಳಲ್ಲಿ 6 ವಿಕೆ
ಟ್ ಗೆ 286 ( ಇಶಾನ್ ಕಿಶನ್ 106, (47 ಎಸೆತ, 11 ಬೌಂಡರಿ, 6 ಸಿಕ್ಸರ್, ಟ್ರೆವರ್ಸ್ ಹೆಡ್ 67 ( 31 ಎಸೆತ, 9 ಬೌಂಡರಿ, 3 ಸಿಕ್ಸರ್) ನಿತೀಶ್ ರೆಡ್ಡಿ 30, ಕ್ಲಾಸೆನ್ 34, ತುಷಾರ್ ದೇಶಪಾಂಡೆ 44 ಕ್ಕೆ 3)
ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 242 ( ಸಂಜು ಸ್ಯಾಮ್ಸನ್ 66, 37 ಎಸೆತ, 7 ಬೌಂಡರಿ, 4 ಸಿಕ್ಸರ್, ದ್ರುವ್ ಜುರೆಲ್ 70 35 ಎಸೆತ, 5 ಬೌಂಡರಿ, 6 ಸಿಕ್ಸರ್, ಸಿರ್ಮಾನ್ ಹೆಟ್ಮೇರ್ 42, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಸುಭಂ ದುಬೈ 34, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಹರ್ಷಲ್ ಪಟೇಲ್ 34 ಕ್ಕೆ 2) ಇಶಾನ್ ಕಿಶನ್ ಪಂದ್ಯ ಶ್ರೇಷ್ಠ