ಕೋಲ್ಕತ್ತಾ: ಕಳೆದ ರಾತ್ರಿ ಇಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣದ 44 ನೇ ಲೀಗ್ ಪಂದ್ಯ ಮಳೆಯಿಂದ ಫಲಿತಾಂಶ ಕಾಣಲಿಲ್ಲ. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನ ಒಂದು ಓವರ್ ಮಾತ್ರ ಸಾಧ್ಯವಾಯಿತು. ನಂತರ ಬಲವಾದ ಗಾಳಿ ಹಾಗೂ ಮಳೆಯಿಂದ ಪಂದ್ಯ ನಡೆಯಲಿಲ್ಲ. ಬಿರುಸಿನ ಗಾಳಿ ಇದ್ದುದರಿಂದ ಮೈದಾನವನ್ನು ಕವರ್ ನಿಂದ ಮುಚ್ಚುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಉಭಯ ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು. ಇದರಿಂದ 11 ಅಂಕಗಳಿಸಿದ ಪಂಜಾಬ್ ಮತ್ತೇ ನಾಲ್ಕನೇ ಸ್ಥಾನಕ್ಕೆ ಬಂದರೆ ಕೋಲ್ಕತ್ತಾ ನೈಟ್ ರೈಡರ್ಸ್ 7 ನೇ ಸ್ಥಾನದಲ್ಲಿ ಉಳಿಯಿತು.