Ad imageAd image

ಐಪಿಎಲ್: ಮೇ. 23 ರ ಬೆಂಗಳೂರು ಪಂದ್ಯ  ಲಕ್ನೋ ಗೆ ಸ್ಥಳಾಂತರ

Bharath Vaibhav
ಐಪಿಎಲ್: ಮೇ. 23 ರ ಬೆಂಗಳೂರು ಪಂದ್ಯ  ಲಕ್ನೋ ಗೆ ಸ್ಥಳಾಂತರ
WhatsApp Group Join Now
Telegram Group Join Now

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ವೇಳಾಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡು ಬದಲಾವಣೆಗಳನ್ನು ಮಾಡಿದೆ. ಮೇ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಿದೆ.

ಬೆಂಗಳೂರಿನ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, SRH ಅನ್ನು ಲಕ್ನೋದಲ್ಲೇ ಉಳಿಯುವಂತೆ ತಿಳಿಸಲಾಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಮೇ 19ರಂದು ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಆಡಿತ್ತು. ನಂತರ ಬೆಂಗಳೂರಿಗೆ ಬರಲು ಹೊರಟಿತ್ತು. ಆದರೆ, ಬಿಸಿಸಿಐ ಅವರಿಗೆ ಲಕ್ನೋದಲ್ಲೇ ಇರಲು ಸೂಚಿಸಿದೆ.

‘ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ TATA IPL ಪಂದ್ಯ ಸಂಖ್ಯೆ 65 ಅನ್ನು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಬಿಸಿಸಿಐ ಮೇ 20 ರಂದು ತಿಳಿಸಿದೆ.

ವೇಳಾಪಟ್ಟಿಯಲ್ಲಿನ ಈ ಬದಲಾವಣೆಯ ಬಗ್ಗೆ RCBಗೆ ತಿಳಿಸಲಾಗಿದೆ. ಅವರು ಈಗ ಲಕ್ನೋಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 23ರಂದು SRH ಅನ್ನು ಎದುರಿಸಲಿದ್ದಾರೆ ಮತ್ತು ನಂತರ ಮೇ 27 ರಂದು LSG ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯವನ್ನು ಅಲ್ಲಿಯೇ ಆಡಲಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!