———————————————————-ನಾಲ್ಕನೇ ಯತ್ನದಲ್ಲಾದರೂ ಕಪ್ ಗೆದ್ದೀತೇ ಆರ್ ಸಿಬಿ?
ಚಂದಿಗಢ: ಬಹು ವರ್ಷಗಳಿಂದ ಐಪಿಎಲ್ ಕಪ್ ಎತ್ತಿ ಹಿಡಿಯಬೇಕೆಂಬ ಆಸೆ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಭರ್ಜರಿ ಪ್ರದರ್ಶನ ತೋರುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಹೊಸ ಆಸೆ ಹುಟ್ಟಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ಕ್ವಾಲಿಪಾಯರ್-1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಏಕ ಪಕ್ಷಿಯ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಮಣಿಸಿ ಫೈನಲ್ ಗೆ ಪ್ರವೇಶ ಪಡೆಯಿತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಬಾರಿ ಕಪ್ ಗೆಲ್ಲಲು ಯತ್ನ ನಡೆಸಲಿದೆ.
ಇಲ್ಲಿನ ಮಹಾರಾಜಾ ಯಧುವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 14.1 ಓವರುಗಳಲ್ಲಿ ಕೇವಲ 101 ರನ್ ಗಳಿಗೆ ಆಲೌಟ್ ಆಗಿ ತೀರಾ ನೀರಸ ಪ್ರದರ್ಶನ ನೀಡಿತು. ಇದರ ಲಾಭವನ್ನು ಭರ್ಜರಿಯಾಗಿ ಪಡೆದುಕೊಂಡ ಆರ್ ಸಿಬಿ ಇನ್ನು 10 ಓವರುಗಳ ಆಟ ಬಾಕಿ ಇರುವಂತೆಯೇ 8 ವಿಕೆಟ್ ಗಳಿಂದ ಪಂದ್ಯ ಗೆದ್ದು ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶ ಮಾಡಿತು.
ಕುಸಿದ ಪಂಜಾಬ್: ಈಡೀ ಪಂದ್ಯಾವಳಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ ಈ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪಂಜಾಬ್ ನ ಎಲ್ಲ ಬ್ಯಾಟಿಂಗ್ ದಾಂಡಿಗರು ವಿಫಲರಾದರು.ಸುಲಭ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅರಾಮವಾಗಿ ರನ್ ಚೇಸ್ ಮಾಡಿತು. ಪಿಲಿಪ್ ಸಾಲ್ಟ್ ಆಕರ್ಷಕ ಅರ್ಧ ಶತಕ ಗಳಿಸಿದರು.
ಸ್ಕೋರ್ ವಿವರ:
ಪಂಜಾಬ್ ಕಿಂಗ್ಸ್ 14.1 ಓವರುಗಳಲ್ಲಿ 101
ಸ್ಟೋನಿಸ್ 26 ( 17 ಎಸೆತ, 2 ಬೌಂಡರಿ, 2 ಸಿಕ್ಸರ್), ಪ್ರಭ್ ಸಿಮ್ರನ್ 18 ( 10 ಎಸೆತ, 2 ಬೌಂಡರಿ, 1 ಸಿಕ್ಸರ್)
ಹೆಜಲ್ ವುಡ್ 21 ಕ್ಕೆ 3, ಸುಯಾಸ್ ಶರ್ಮಾ 17 ಕ್ಕೆ 3) ಯಶ್ ದಯಾಲ್ 26 ಕ್ಕೆ 2)
ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರುಗಳಲ್ಲಿ 2 ವಿಕೆಟ್ ಗೆ 106
ಪಿಲಪ್ ಸಾಲ್ಟ್ 56 ( 27 ಎಸೆತ, 6 ಬೌಂಡರಿ, 3 ಸಿಕ್ಸರ್) ಮಯಾಂಕ ಅಗರವಾಲ್ 19 ( 13 ಎಸೆತ, 2 ಬೌಂಡರಿ, 1 ಸಿಕ್ಸರ್ ) ರಜತ್ ಪಟಿದಾರ 15 ( 8 ಎಸೆತ, 1 ಬೌಂಡರಿ, 1 ಸಿಕ್ಸರ್) ಪಂದ್ಯ ಶ್ರೇಷ್ಠ: ಶುಯಾಸ್ ಶರ್ಮಾ




