ಲಕ್ನೋ: ಸಿಮರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಇಲ್ಲಿ ನಡೆದ ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಸುಲಭವಾಗಿ ಗೆದ್ದಿತು.
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 171 ರನ್ ಗಳಿಸಿತು. ಸ್ಪರ್ಧಾತ್ಮಕ ಎನ್ನಬಹುದಾದ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 16.2 ಓವರುಗಳಲ್ಲಿ 2 ವಿಕೆಟ್ ಗೆ 177 ರನ್ ಗಳಿಸಿ ಬಹು ಸುಲಭವಾಗಿ ಜಯಗಳಿಸಿತು. ಪಂಜಾಬ್ ಕಿಂಗ್ಸ್ ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಬಂದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ರನ್ ಸರಾಸರಿ ಆಧಾರದ ಮೇಲೆ ಮೊದಲ ಸ್ಥಾನದಲ್ಲಿದೆ.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 171
ನಿಕೋಲಸ್ ಪೋರನ್ 44 (30 ಎಸೆತ, 5 ಬೌಂಡರಿ, 2 ಸಿಕ್ಸರ್), ಅಯುಷ್ ಬದೋನಿ 41( 33 ಎಸೆತ, 1 ಬೌಂಡರಿ, 3 ಸಿಕ್ಸರ್)
ಅಬ್ದುಲ್ ಸಾಮದ 27 ( 12 ಎಸೆತ, 2 ಬೌಂಡರಿ, 2 ಸಿಕ್ಸರ್) ಅರ್ಷ ದೀಪ್ ಸಿಂಗ್ 43 ಕ್ಕೆ 3)
ಪಂಜಾಬ್ ಕಿಂಗ್ಸ್ 16.2 ಓವರುಗಳಲ್ಲಿ 2 ವಿಕೆಟ್ ಗೆ 177
ಸಿಮರನ್ ಸಿಂಗ್ 69 ( 34 ಎಸೆತ, 3 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ ಅಜೇಯ 52 ( 30 ಎಸೆತ, 3 ಬೌಂಡರಿ, 2 ಸಿಕ್ಸರ್) ನೇಹಲ್ ವಡೇರಾ 43 (23 ಎಸೆತ, 3 ಬೌಂಡರಿ, 1 ಸಿಕ್ಸರ್) ಪಂದ್ಯ ಶ್ರೇಷ್ಠ: ಸಿಮರನ್ ಸಿಂಗ್