———————————————————————-ಮಹತ್ವದ ಗೆಲುವಿಗಾಗಿ ಬಲಾಢ್ಯ ತಂಡಗಳ ಕಾದಾಟ
———————————————————————-ಪಂಜಾಬ್ ಹುಲಿಗಳಿಗೆ ಮುಂಬೈ ದಾಂಡಿಗರ ಸವಾಲು
ಜೈಪುರ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕೊನೆಯ ಹಂತದ, ನಿರ್ಣಾಯಕ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಪ್ಲೇ ಆಪ್ ಪಂದ್ಯಗಳ ಪೈಕಿ ಮೊದಲ ಪಂದ್ಯ ಇಂದು ಇಲ್ಲಿನ ಸ್ವಾಮಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಸಾಯಂಕಾಲ 7:30 ಕ್ಕೆ ನಡೆಯುತ್ತಿದೆ.
ಈ ಬಾರಿಯ, 18 ನೇ ಆವೃತ್ತಿಯ ಪ್ಲೇ ಪಂದ್ಯಗಳಿಗೆ ನಾಲ್ಕು ತಂಡಗಳು ಅರ್ಹತೆ ಗಳಿಸಿದ್ದು, ಈ ಪೈಕಿ ಇಂದು ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಎರಡೂ ಪಂದ್ಯಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಉಭಯ ತಂಡಗಳಿಗೂ ಗೆಲುವು ಅನಿವಾರ್ಯ. ದಾಖಲೆಗಳ ಪ್ರಕಾರ ಎರಡೂ ತಂಡಗಳು ಬಲಾಢ್ಯ ತಂಡಗಳೇ ಆಗಿದ್ದು,ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.
ಪಂಜಾಬ್ ಕಿಂಗ್ಸ್ ತಂಡ ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಆಟವಾಡಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಆರಂಭ ಪಂದ್ಯಗಳಲ್ಲಿ ಎಡವಿದರೂ ಕೂಡ ನಂತರದ ಪಂದ್ಯಗಳಲ್ಲಿ ಚುರುಕಿನ ಪ್ರದರ್ಶನ ನೀಡಿ ಪ್ಲೇ ಆಪ್ ಗೆ ಅರ್ಹತೆ ಪಡೆಯಲು ಯಶಸ್ವಿಯಾಯಿತು. ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಾಢ್ಯವಾಗಿವೆ.
ಪಂಜಾಬ್ ಕಿಂಗ್ಸ್ ಕೊಂಚ ಬ್ಯಾಟಿಂಗ್ ನಲ್ಲಿ ಹೆಚ್ಚು ಬಲಾಢ್ಯವಾಗಿದೆ ಎಂದೂ ಅನಿಸಿದರೆ, ಬೌಲಿಂಗ್ ನಲ್ಲಿ ಮುಂಬೈ ಇಂಡಿಯನ್ಸ್ ಕೊಂಚ ಪ್ರಬಲವಾಗಿದೆ ಎಂದೆನಿಸದೇ ಇರದು. ಇನ್ನುಳಿದಂತೆ ಗೆಲವು- ಸೋಲಿನ ಲೆಕ್ಕದಲ್ಲಿಯೂ ಎರಡೂ ತಂಡಗಳು ಬಹುತೇಕ ಸಮಾನ ಪ್ರದರ್ಶನ ನೀಡಿವೆ.




