Ad imageAd image

ಐಪಿಎಲ್ ಈ ವರೆಗಿನ 17 ಆವೃತ್ತಿಗಳಲ್ಲಿ ಗೆದ್ದವರು

Bharath Vaibhav
ಐಪಿಎಲ್ ಈ ವರೆಗಿನ 17 ಆವೃತ್ತಿಗಳಲ್ಲಿ ಗೆದ್ದವರು
WhatsApp Group Join Now
Telegram Group Join Now

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಎಲ್ಲಾ 10 ತಂಡಗಳು ವ್ಯಾಪಕ ಸಿದ್ಧತೆ ಮಾಡಿಕೊಂಡಿವೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಟ್ರೋಫಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದು, ಉಳಿದ ತಂಡಗಳು ಟ್ರೋಫಿ ಗೆಲ್ಲಲು ಕಸರತ್ತು ನಡೆಸುತ್ತಿವೆ.

ಮಾರ್ಚ್ 22ರ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇದೀಗ ಪಂದ್ಯಕ್ಕೆ ಮಳೆ ಅಡ್ಡಿ ಎದುರಾಗಿದೆ. ಕೋಲ್ಕತ್ತಾದಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ ಟಿ20 ಲೀಗ್ ಆಗಿದ್ದು, ಜಗತ್ತಿನಾದ್ಯಂತದ ಅತ್ಯುತ್ತಮ ಕ್ರಿಕೆಟಿಗರನ್ನು ಒಳಗೊಂಡಿದೆ. ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು, ಫ್ರಾಂಚೈಸಿಗಳು ಎರಡು ತಿಂಗಳ ಅವಧಿಯಲ್ಲಿ 16-17 ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಬೇಕು.

ಕಳೆದ 17 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿವೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ತಂಡಗಳು 10 ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ.

ಪಿಎಲ್ ವಿಜೇತರ ಪಟ್ಟಿ: ರಾಜಸ್ಥಾನ ರಾಯಲ್ಸ್ 2008ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 2023 ರಲ್ಲಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಮನಾಗಿ ಪ್ರಶಸ್ತಿ ಗೆದ್ದುಕೊಂಡಿತು. 2024ನೇ ಆವೃತ್ತಿಯಲ್ಲಿ ಕೆಕೆಆರ್ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್‌ನ 10 ತಂಡಗಳ ಪೈಕಿ ಈವರೆಗೂ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಯ ಬರ ಎದುರಿಸುತ್ತಿವೆ.

  1. 2008 – ರಾಜಸ್ಥಾನ್ ರಾಯಲ್ಸ್
  2. 2009 – ಡೆಕ್ಕನ್ ಚಾರ್ಜಸ್
  3. 2010 – ಚೆನ್ನೈ ಸೂಪರ್ ಕಿಂಗ್ಸ್
  4. 2011 – ಚೆನ್ನೈ ಸೂಪರ್ ಕಿಂಗ್ಸ್
  5. 2012 – ಕೋಲ್ಕತ್ತಾ ನೈಟ್ ರೈಡರ್ಸ್
  6. 2013 – ಮುಂಬೈ ಇಂಡಿಯನ್ಸ್
  7. 2014 – ಕೋಲ್ಕತ್ತಾ ನೈಟ್ ರೈಡರ್ಸ್
  8. 2015 – ಮುಂಬೈ ಇಂಡಿಯನ್ಸ್
  9. 2016 – ಸನ್‌ರೈಸರ್ಸ್ ಹೈದರಾಬಾದ್
  10. 2017 – ಮುಂಬೈ ಇಂಡಿಯನ್ಸ್
  11. 2018 – ಚೆನ್ನೈ ಸೂಪರ್ ಕಿಂಗ್ಸ್
  12. 2019 – ಮುಂಬೈ ಇಂಡಿಯನ್ಸ್
  13. 2020 – ಮುಂಬೈ ಇಂಡಿಯನ್ಸ್
  14. 2021 – ಚೆನ್ನೈ ಸೂಪರ್ ಕಿಂಗ್ಸ್
  15. 2022 – ಗುಜರಾತ್ ಟೈಟಾನ್ಸ್
  16. 2023 – ಚೆನ್ನೈ ಸೂಪರ್ ಕಿಂಗ್ಸ್
  17. 2024 – ಕೋಲ್ಕತ್ತಾ ನೈಟ್ ರೈಡರ್ಸ್
WhatsApp Group Join Now
Telegram Group Join Now
Share This Article
error: Content is protected !!