ಹೈದರಾಬಾದ್ : ನಾಯಕ ಶುಭಮಾನ್ ಗಿಲ್ ಅವರ ಅಜೇಯ ಅರ್ಧ ಶತಕ (61) ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 19 ನೇ ಲೀಗ್ ಪಂದ್ಯದಲ್ಲಿ ಸನ್ ರೈಸ್ ಹೈದರಾಬಾದ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿತು.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸ್ ಹೈದರಾಬಾದ್ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 152 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 16.4 ಓವರುಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 153 ರನ್ ಗಳಿಸಿ ಜಯದ ನಗೆ ಬೀರಿತು. ಈ ಫಲಿತಾಂಶದೊಂದಿಗೆ ತಲಾ 6 ಅಂಕಗಳನ್ನು ಗಳಿಸಿರುವ ದೆಹಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದವು. ತಲಾ 4 ಅಂಕಗಳನ್ನು ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ.
ಸ್ಕೋರ್ ವಿವರ:
ಸನ್ ರೈಸ್ ಹೈದರಾಬಾದ್ 20 ಓವರುಗಳಲ್ಲಿ 8 ವಿಕೆಟ್ ಗೆ 152
ನಿತೀಶ್ ರೆಡ್ಡಿ 31 ( 34 ಎಸೆತ, 3 ಬೌಂಡರಿ), ಕ್ಲಾಸೆನ್ 27 ( 19 ಎಸೆತ, 2 ಬೌಂಡರಿ, 1 ಸಿಕ್ಸರ್)
ಕಮ್ಮಿನ್ಸ್ 22 ( 9 ಎಸೆತ, 3 ಬೌಂಡರಿ, 1 ಸಿಕ್ಸರ್ ) ಮೊಹ್ಮದ್ ಶಿರಾಜ್ 17 ಕ್ಕೆ 4
ಗುಜರಾತ್ ಟೈಟನ್ಸ್ 16.4 ಓವರುಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 153
ಶುಭಮಾನ್ ಗಿಲ್ ಅಜೇಯ 61 ( 43 ಎಸೆತ, 9 ಬೌಂಡರಿ), ವಾಷಿಂಗ್ಟನ್ ಸುಂದರ್ 49 ( 29 ಎಸೆತ, 5 ಬೌಂಡರಿ, 2 ಸಿಕ್ಸರ್)
ಶೆರಫಾನ್ ರುದರ್ ಪೋರ್ಡ್ 35( 16 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊಹ್ಮದ ಶೆಮಿ 28 ಕ್ಕೆ 2)
ಪಂದ್ಯ ಶ್ರೇಷ್ಠ : ಮೊಹ್ಮದ ಶಿರಾಜ್