Ad imageAd image

CRPF ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಜೆ. ಪಿ ಸಿಂಗ್ ನೇಮಕ 

Bharath Vaibhav
CRPF ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಜೆ. ಪಿ ಸಿಂಗ್ ನೇಮಕ 
WhatsApp Group Join Now
Telegram Group Join Now

ನವದೆಹಲಿ : ಕೇಂದ್ರ ಸರ್ಕಾರ ಶನಿವಾರ ಹಿರಿಯ ಐಪಿಎಸ್ ಅಧಿಕಾರಿ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.

1991 ರ ಬ್ಯಾಚ್‌ನ ಅಸ್ಸಾಂ-ಮೇಘಾಲಯ ಕೇಡರ್‌ನ ಐಪಿಎಸ್ ಅಧಿಕಾರಿ ಸಿಂಗ್, ಪ್ರಸ್ತುತ ಅಸ್ಸಾಂನ ಮಹಾನಿರ್ದೇಶಕರಾಗಿ (DGP) ಕಾರ್ಯನಿರ್ವಹಿಸುತ್ತಿದ್ದಾರೆ.ಗೃಹ ಸಚಿವಾಲಯವು ಅವರ ಹೆಸರನ್ನು ಪ್ರಸ್ತಾಪಿಸಿದ ಕೆಲವು ದಿನಗಳ ನಂತರ ಅವರನ್ನು ನೇಮಕ ಮಾಡಲಾಗಿದೆ.

ಜನವರಿ 18 ರಂದು ಹೊರಡಿಸಲಾದ ಆದೇಶದಲ್ಲಿ, ನಿರ್ದೇಶಕಿ ಸಾಕ್ಷಿ ಮಿತ್ತಲ್, “ಜಿ ಪಿ ಸಿಂಗ್ ಅವರನ್ನು ಸಿಆರ್‌ಪಿಎಫ್‌ನ ಡಿಜಿಯಾಗಿ ನೇಮಕ ಮಾಡಲು ಗೃಹ ಸಚಿವಾಲಯದ ಪ್ರಸ್ತಾವನೆಯನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ, ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡ ದಿನಾಂಕದಿಂದ ನವೆಂಬರ್ 30, 2027 ರಂದು ಅವರ ನಿವೃತ್ತಿಯ ದಿನಾಂಕದವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ” ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!