ಇರಾನ್ ಹಾಗೂ ಅಮೇರಿಕ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದು, ೧೯೭೯ ರ ನಂತರ ಎರಡು ದೇಶಗಳ ನಡುವೆ ನಡೆಯುತ್ತಿರುವ ಮೊದಲ ಸಂಧಾನ ಸಭೆ ಇದಾಗಿದೆ.
ಯುದ್ದ ನಿಲ್ಲಿಸುವ ಸಂಬAಧ ಎರಡೂ ದೇಶಗಳ ನಡುವೆ ಸಂಧಾನ ಏರ್ಪಡಬೇಕೆಂದರೆ ಉಭಯ ರಾಷ್ಟçಗಳಿಂದ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸಂಧಾನ ಸಭೆ ಹಲವು ಸವಾಲುಗಳನ್ನು ಹೊತ್ತು ನಿಂತಿದೆ.
ಏತನ್ಮಧ್ಯೆ ಇರಾನ್ ಕಡೆಯಿಂದ ಮಾತುಕತೆಯಲ್ಲಿ ಇರಾನ್ ಪಾರ್ಲಿಮೆಂಟ್‌ನ ಸ್ಪೀಕರ್ ಮೊಹ್ಮದ್ ಬಖೇರ್ ಖಾಲಿಭಪ್, ವಿದೇಶಾಂಗ ಸಚಿವ ಅಬ್ಬಾಸ್ ಅರಘಾಚಿ, ಇರಾನ್ ರಾಷ್ಟಿçÃಯ ಭದ್ರತಾ ಫರಿಷತ್‌ನ ಹೊಸ ಕಾರ್ಯದರ್ಶಿ ಮೊಹ್ಮದ ಅಖೇರ್ ಝೋಲಾಖದ್ರ ಪಾಲ್ಗೊಂಡಿದ್ದಾರೆ.
ಅಮೇರಿಕದ ಕಡೆಯಿಂದ ಉಪಾಧ್ಯಕ್ಷ ಝೆ.ಡಿ. ವ್ಯಾನ್ಸ್, ವೈಟ್ ಹೌಸ್‌ನ ವಿಶೇಷ ಅಧಿಕಾರಿ ಎನ್ವೋಯ್ ಸ್ಟೀವ್ ವಿಟ್ಕೋಪ್ ಹಾಗೂ ಅಮೇರಿಕ ಅಧ್ಯಕ್ಷ ಟ್ರಂಫ್ ಅವರ ಅಳಿಯ ಜರೇಡ್ ಖುಷ್ನೇರ್ ಭಾಗವಹಿಸಿದ್ದಾರೆ.
ಇರಾನ್- ಅಮೇರಿಕ ಶಾಂತಿ ಮಾತುಕತೆ: ೧೯೭೯ ರ ನಂತರ ಮೊದಲ ಪ್ರಯತ್ನ




