——————————————————ಪಶ್ಚಿಮ ಏಷ್ಯಾ ಸಂಘರ್ಷ:
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬAಧಿಸಿದAತೆ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಇರಾನ್- ಅಮೇರಿಕ ಸಂಧಾನ ಮಾತುಕೆಯಲ್ಲಿ ಪಾಲ್ಗೊಳ್ಳಲು ಇರಾನ್ ಉನ್ನತ ಮಟ್ಟದ ನಿಯೋಗ ಶುಕ್ರವಾರ ತಡರಾತ್ರಿ ಇಸ್ಲಾಮಾಬಾದ್ಗೆ ಬಂದಿಳಿದಿದೆ ಎಂದು ವರದಿ ತಿಳಿಸಿದೆ.
ಇರಾನ್ ಸಂಸತ್ನ ಸ್ಪೀಕರ್ ಮೊಹ್ಮದ್ ಬಘೇರ್ ಖ್ವಾಲಿಭಪ್ ಹಾಗೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘಾಚಿ ನೇತೃತ್ವದ ಇರಾನ್ ನಿಯೋಗ ಪಾಕಿಸ್ತಾನ್ ತಲುಪಿದೆ.
ಇರಾನ್ ಈ ನಿಯೋಗವನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ್ ವಿದೇಶಾಂಗ ಸಚಿವರಾದ ಇಶಾಖ್ ದಾರ್ ಬರಮಾಡಿಕೊಂಡರು ಎಂದು ಪಾಕಿಸ್ತಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆ ತಿಳಿಸಿದೆ.




