ಹೈದರಾಬಾದ್: ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 41 ನೇ ಪಂದ್ಯದಲ್ಲಿ ಸನ್ ರೈಜರ್ಸ್ನ ಇಶಾನ್ ಕಿಶನ್ ಔಟಾಗದೇಯೇ ಪೆವಿಲಿಯನ್ ಗೆ ನಡೆದುಕೊಂಡ ಹೋದ ರೀತಿ ಅಚ್ಛರಿ ಮೂಡಿಸಿತು.
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಇಶಾನ್ ಕಿಶನ್ ಔಟಾಗದೇ, ಅಂಪೈರ್ ಔಟ್ ಎಂದು ಘೋಷಿಸದೇ, ವಿಕೆಟ್ ಗಾಗಿ ಮುಂಬೈ ಇಂಡಿಯನ್ ಬೌಲರ್ ಹಾಗೂ ಫಿಲ್ಡರುಗಳು ಅಂಪೈರ್ ಗೆ ಮನವಿ ಮಾಡದಿದ್ದರೂ ಇಶಾನ್ ಕಿಶನ್ ತಾವಾಗಿ ಪೆವಿಲಿಯನ್ ಗೆ ನಿರ್ಗಮಿಸಿದ್ದು, ತೀವ್ರ ಅಚ್ಛರಿಗೆ ಕಾರಣವಾಯಿತು.
ಮೊದಲು ಇಶಾನ್ ಕಿಶನ್ ಕ್ರೀಡಾ ಮನೋಭಾವ ಮೆರೆದರು. ತಾವಾಗಿ ಪೆವಿಲಿಯನ್ ಗೆ ಹೋಗುತ್ತಿದ್ದಾರೆ ಎಂದೆನಿಸಿತ್ತು. ಆದರೆ ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟಿನಿಂದ ದೂರ ಪಾಸ್ ಆಗಿ ವಿಕೆಟ್ ಕೀಪರ್ ಕೈ ಸೇರಿದ್ದು ಕಂಡು ಬಂತ್ತು. ನಂತರ ಇಶಾನ್ ಕಿಶನ್ ಅವರ ನಡೆಗೆ ಎಲ್ಲೆಡೆ ಅಚ್ಚರಿ ಮೂಡಿತು.