ನವದೆಹಲಿ: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್ ಇಶಾನ್ ಕಿಶನ್ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಸನ್‌ರೈರ‍್ಸ್ ಹೈದರಾಬಾದ್ ತಂಡದ ಸದ್ಯದ ನಾಯಕ ಆಸ್ಟೆçÃಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಪಂದ್ಯಾವಳಿಗೆ ಗೈರು ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಂಡದ ವ್ಯವಸ್ಥಾಪಕ ಮಂಡಳಿ ಈ ಕ್ರಮ ವಹಿಸಿದೆ.
ಏತನ್ಮಧ್ಯೆ ಪ್ಯಾಟ್ ಕಮ್ಮಿನ್ಸ್ ಅವರಿಂದ ಇನ್ನು ತಂಡಕ್ಕೆ ಮಾಹಿತಿ ಬಂದಿಲ್ಲ. ತದನಂತರವೇ ಟೀಮ್ ಮ್ಯಾನೆಜ್‌ಮೆಂಟ್ ನರ‍್ಧಾರ ತೆಗೆದುಕೊಳ್ಳಲಿದೆ. ಆದರೆ ಒಂದು ಪ್ಯಾಟ್ ಕಮ್ಮಿನ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳದಿದ್ದರೆ, ಇಶಾನ್ ಕಿಶನ್ ಸನ್‌ರೈರ‍್ಸ್ ಹೈದರಾಬಾದ್ ತಂಡದ ನಾಯಕರಾಗುವ ಸಾಧ್ಯತೆ ಇದೆ.




