ಹಾವೇರಿ: ‘ಸ್ವಾತಿ ಬ್ಯಾಡಗಿ ಅವರ ಹತ್ಯೆ ಖಂಡನೀಯ. ಈ ರೀತಿ ಹಿಂದೂ ಯುವತಿಯರನ್ನು ಕೊಲ್ಲುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಯಾಗಬೇಕು’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
ಆಗ್ರಹಿಸಿದರು.
ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರಿನಲ್ಲಿರುವ ಸ್ವಾತಿ ಮನೆಗೆ ಭೇಟಿ ನೀಡಿದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸ್ವಾತಿ ಅವರ ತಾಯಿ ಅಂಗನವಾಡಿಯಲ್ಲಿ ಅಡುಗೆ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರ ಬಡತನದ ಕಥೆ ಕೇಳಿ ಕಣ್ಣೀರು ಬಂತು’ ಎಂದರು.
‘ಸ್ವಾತಿ ಹತ್ಯೆಯಾಗಿ 16 ದಿನವಾದರೂ ಉಸ್ತುವಾರಿ ಸಚಿವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಅದೇ ಮುಸ್ಲಿಂ ಯುವತಿ ಆಗಿದ್ದರ ಇಡೀ ಸರ್ಕಾರವೇ ಅವರ ಮನೆಯಲ್ಲಿರುತ್ತಿತ್ತು. ಈ ರಾಜ್ಯ
ಸರ್ಕಾರ, ಮುಸ್ಲಿಂರನ್ನು ಓಲೈಸುವ ಕೆಲಸ ಮಾಡುತ್ತಿದೆ. ಅವರ ಗುಲಾಮಗಿರಿ ಮಾಡುತ್ತಿದೆ’ ಎಂದರು.
‘ಸ್ವಾತಿ ಬ್ಯಾಡಗಿ ಅವರ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ ಮಲಗಿದ್ದಾರೆ. ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಇದುವರೆಗೂ ವರದಿ ನೀಡಿಲ್ಲ. ಇಂಥ ಬೇಜವಾಬ್ದಾರಿಯಾಗಿ ವರ್ತಿಸಿರುವ ಅಧಿಕಾರಿಗಳ
ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.