ರಾಯಬಾಗ : ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಜನ ಪ್ರತಿನಿಧಿಗಳ ಕೋರಂ ಇಲ್ಲದ ಕಾರಣ ಮೊಟಕುಗೊಳಿಸಲಾಯಿತು ಒಟ್ಟು ಹದಿಮೂರು ಜನ ಜನಪ್ರತಿನಿಧಿಗಳಲ್ಲಿ ಕೇವಲ ನಾಲ್ಕು ಜನ ಮಾತ್ರಾ ಭಾಗವಹಿಸಿದ್ದರು.
ಏಕೆ ಈ ರೀತಿಯಾಗಿದೆ ಎಂದು ಕೇಳಿದರೆ ಗ್ರಾಮ ಸಭೆಯ ಮಾಹಿತಿಯನ್ನು ನೀಡದೆ ಪಿಡಿಓ ಆದ ರಾಮಣ್ಣಗೌಡ ಪಾಟೀಲ್ ಅವರು ಜನರ ಗಮನಕ್ಕೆ ತರದೆ ಯಾವುದೇ ಪ್ರಕಟಣೆ ಹೊರಡಿಸಿದೆ ಅತೀ ತುರ್ತಾಗಿ ಸಭೆಯನ್ನು ಆಯೋಜಿಸಿದ್ದಾರೆ ಅಷ್ಟೇ ಅಲ್ಲದೆ ಜನಪ್ರತಿನಿಧಿಗಳಿಗೆ ನೊಟೀಸ್ ನೀಡಿದ್ದರು ಕೂಡ ಜನಪ್ರತಿನಿಧಿಗಳು ಬಂದಿರುವುದಿಲ್ಲ ಈ ಎಲ್ಲ ಬೆಳವಣಿಗೆ ನೋಡಿದರೆ ಗ್ರಾಮದ ಅಭಿವೃದ್ಧಿ ಶೂನ್ಯ ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲಿ ಚರ್ಚೆ ಮಾಡುತ್ತಿದ್ದಾರೆ.
ವರದಿ : ಪರಶುರಾಮ ತೆಳಗಡೆ




