ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ತೀವ್ರ ಪೈಪೋಟಿಯಿಂದ ಕೂಡಿತ್ತು. ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳು ತಮ್ಮ ಖ್ಯಾತಿಗೆ ತಕ್ಕುದಾದ ಪ್ರದರ‍್ಶನ ನೀಡಿವೆ.
ಅಂತಿಮವಾಗಿ ನಾಲ್ಕು ಬಲಾಢ್ಯ ತಂಡಗಳು ಸೆಮಿಫೈನಲ್ ತಲುಪಿವೆ.
ಭಾರತ-ಇಂಗ್ಲೆAಡ್ ಹಾಗೂ ದಕ್ಷಿಣ ಆಫ್ರಿಕಾ- ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವುದರಿಂದ ನಾಲ್ಕೂ ಬಲಾಢ್ಯ ತಂಡಗಳು ಉಪಾಂತ್ಯ ತಲುಪಿವೆ ಎಂದು ಕ್ರಿಕೆಟ್ ಪಂಡಿತರ ಹಾಗೂ ಅಭಿಮಾನಿಗಳ ಅನಿಸಿಕೆ.
ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಎಲ್ಲ ನಾಲ್ಕೂ ತಂಡಗಳು ಉತ್ತಮವಾಗಿಯೇ ಆಡಿವೆ ಅಲ್ಲದೇ ಇತ್ತೀಚೆಗಿನ ದಿನಗಳಲ್ಲಿ ಸತತವಾಗಿ ಉತ್ತಮ ಪ್ರದರ‍್ಶನ ನೀಡುವ ತಂಡಗಳೇ ಉಪಾಂತ್ಯ ತಲುಪಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ವಿಷಯ. ಅಲ್ಲದೇ ಮುಂದಿನ ಮೂರು ಪಂದ್ಯಗಳು ಕೂಡ ತೀವ್ರ ಹೋರಾಟದಿಂದ ಕೂಡಿರುತ್ತವೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.
ಸೂಪರ್-೮ ರ ಘಟ್ಟದ ನಂತರ ಸೆಮಿಫೈನಲ್‌ಗೆ ತಲುಪಲು ಇನ್ನಿಲ್ಲಯ ಯತ್ನ ನಡೆಸಿದ ಜಿಂಬಾಬ್ವೆ, ಶ್ರೀಲಂಕಾ ಹಾಗೂ ಪಾಕಿಸ್ತಾನ್ ತಂಡಗಳು ಕೂಡ ಪಂದ್ಯಾವಳಿಯಲ್ಲಿ ಗಮನ ಸೆಳೆವ ಪ್ರದರ‍್ಶನ ನೀಡಿವೆ.
ಬಲಾಢ್ಯ ತಂಡಗಳೇ ಸೆಮಿಫೈನಲ್ ತಲುಪಿದ್ದು ಖುಷಿ ವಿಚಾರ




