Ad imageAd image

ರಾತ್ರಿ ಊಟಕ್ಕೆ ಅನ್ನ ತಿನ್ನಬಾರದು ಎನ್ನುವುದರ ಹಿಂದಿದೆ ಕಾರಣ!

Bharath Vaibhav
ರಾತ್ರಿ ಊಟಕ್ಕೆ ಅನ್ನ ತಿನ್ನಬಾರದು ಎನ್ನುವುದರ ಹಿಂದಿದೆ ಕಾರಣ!
WhatsApp Group Join Now
Telegram Group Join Now

ರಾತ್ರಿ ಸಮಯದಲ್ಲಿ ಅನ್ನ (Cooked rice) ತಿನ್ನುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವ ಪ್ರಕಾರ, ಅನ್ನ ನಮ್ಮ ದೇಹಕ್ಕೆ ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆಯಾದರೂ, ತಡರಾತ್ರಿ ಇದನ್ನು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ರಾತ್ರಿ ಊಟದ ಸಮಯದಲ್ಲಿ ಅನ್ನ ಮತ್ತು ಇತರ ಅಕ್ಕಿ ಸೇರಿಸಿ ತಯಾರಿಸಿದ ಆಹಾರಗಳ ಸೇವನೆ ಮಾಡುವುದನ್ನು ಏಕೆ ತಪ್ಪಿಸಬೇಕು? ಅದರ ಬದಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.|

ಅಕ್ಕಿ (rice) ಬಹುತೇಕ ಪ್ರತಿ ಮನೆಯ ಪ್ರಧಾನ ಆಹಾರವಾಗಿದೆ. ಅನೇಕರು ಮಧ್ಯಾಹ್ನ ಮತ್ತು ರಾತ್ರಿ (night) ಊಟಕ್ಕೆ ಅನ್ನವನ್ನು ಸೇವನೆ ಮಾಡಲು ಬಹಳ ಇಷ್ಟಪಡುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಅನ್ನ (Cooked rice) ತಿನ್ನುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವ ಪ್ರಕಾರ, ಅನ್ನ ನಮ್ಮ ದೇಹಕ್ಕೆ ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆಯಾದರೂ, ತಡರಾತ್ರಿ ಇದನ್ನು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ರಾತ್ರಿ ಊಟದ ಸಮಯದಲ್ಲಿ ಅನ್ನ ಮತ್ತು ಇತರ ಅಕ್ಕಿ ಸೇರಿಸಿ ತಯಾರಿಸಿದ ಆಹಾರಗಳ ಸೇವನೆ ಮಾಡುವುದನ್ನು ಏಕೆ ತಪ್ಪಿಸಬೇಕು? ಅದರ ಬದಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ:
ಸಾಮಾನ್ಯವಾಗಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ, ರಾತ್ರಿ ಸಮಯದಲ್ಲಿ ನಮ್ಮ ದೈಹಿಕ ಚಟುವಟಿಕೆ ತುಂಬಾ ಕಡಿಮೆ ಇರುವುದರಿಂದ, ಕಾರ್ಬೋಹೈಡ್ರೇಟ್ ಭರಿತ ಆಹಾರವನ್ನು ಸೇವಿಸುವುದರಿಂದ ಹೆಚ್ಚುವರಿ ಕ್ಯಾಲೊರಿಗಳ ಸಂಗ್ರಹವಾಗುತ್ತದೆ. ಅದಲ್ಲದೆ ನಿದ್ರೆ ಮಾಡುವ ಸಮಯದಲ್ಲಿ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಇದರಿಂದಾಗಿ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವುದು ನಿಮಗೆ ಕಷ್ಟವಾಗುತ್ತದೆ. ಇದು ಕಾಲಾನಂತರದಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ:
ಬಿಳಿ ಅಕ್ಕಿಯಲ್ಲಿ ಹೆಚ್ಚಿನ ಮಟ್ಟದ ಗ್ಲೈಸೆಮಿಕ್ ಸೂಚ್ಯಂಕವಿದೆ. ಇದರರ್ಥ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿ ಊಟಕ್ಕೆ ಅನ್ನವನ್ನು ಸೇವನೆ ಮಾಡುವುದು ರಕ್ತದಲ್ಲಿನ ಸಕ್ಕರೆ ಮಟ್ಟದ ಹಠಾತ್ ಏರಿಕೆಗೆ ಕಾರಣವಾಗಬಹುದು, ವಿಶೇಷವಾಗಿ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧ ಇರುವವರಿಗೆ ಇದರ ಪರಿಣಾಮ ಕಾಣಿಸಬಹುದು. ಕಾಲಾನಂತರದಲ್ಲಿ, ಇದು ಟೈಪ್ 2 ಮಧುಮೇಹ ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರದ ಆಯ್ಕೆ ಒಳ್ಳೆಯದು.

ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ:
ಅನೇಕರು ರಾತ್ರಿ ಊಟದ ಸಮಯದಲ್ಲಿ ಅನ್ನ ಸೇವನೆ ಮಾಡಿದ ನಂತರ ಉಬ್ಬರ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತಾರೆ. ಅದಲ್ಲದೆ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ ಅದರಲ್ಲಿಯೂ ರಾತ್ರಿ ಸಮಯದಲ್ಲಿ ಇನ್ನು ನಿಧಾನಗೊಳ್ಳುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಇಲ್ಲದವರಲ್ಲಿ, ರಾತ್ರಿ ಊಟಕ್ಕೆ ಅನ್ನ ತಿಂದರೆ ಆಮ್ಲೀಯತೆ ಮತ್ತು ಗ್ಯಾಸ್ ಉಂಟಾಗಿ, ಇದು ನಿಮ್ಮ ನಿದ್ರೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

WhatsApp Group Join Now
Telegram Group Join Now
Share This Article
error: Content is protected !!