ಬಿಕಾನೇರ್ (ರಾಜಸ್ಥಾನ): ನಮ್ಮ ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಕುಂಕುಮವನ್ನು ಅಳಿಸಿದ ಕಾರ್ಯಕ್ಕೆ ನಮ್ಮ ಸೇನೆ ತಕ್ಕ ಮತ್ತು ಸಮರ್ಥ ಉತ್ತರವನ್ನು ನಿರಂತರವಾಗಿ ನೀಡುತ್ತಿದೆ. ನಮ್ಮ ಸೇನೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಸೇನೆ ಪಾಕಿಸ್ತಾನದ ಕಾರ್ಯಕ್ಕೆ ಶಿಕ್ಷೆ ನೀಡಲಿದೆ. ಸಿಂಧೂರ ನಾಶಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳುವುದು ಅತ್ಯಗತ್ಯ ಎಂದು ಇಲ್ಲಿನ ಪಾಕ್ ಗಡಿ ಪ್ರದೇಶ ಹಂಚಿಕೊಂಡಿರುವ ಕುಟುಂಬದ ಮಹಿಳೆಯರು ತಿಳಿಸಿದ್ದಾರೆ.
ಭಾರತ – ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಮಹಿಳೆಯರು, ಪಾಕಿಸ್ತಾನದ ಮಾಡಿದ್ದು ಸರಿಯಲ್ಲ. ಅದಕ್ಕೆ ಭಾರತ ತಕ್ಕ ಉತ್ತರ ನೀಡಿದೆ ಎಂದರು.
ಈ ಹಿಂದೆ ಕೂಡ ಪಾಕಿಸ್ತಾನ ಇದೇ ರೀತಿ ಹಲವು ಕೃತ್ಯ ನಡೆಸಿದೆ. ಇದೀಗ ಪರಿಸ್ಥಿತಿ ಕೈ ಮೀರಿದೆ. ಇಂದು ಅವರು, ನಮ್ಮ ಮಹಿಳೆಯರು ಸಿಂಧೂರ ತೆಗೆದಿದೆ. ನಾಳೆ ಇದು ಯಾರಿಗಾದರೂ ಆಗಬಹುದು. ಭವಿಷ್ಯದಲ್ಲಿ ಈ ರೀತಿ ನಡೆಯದಂತೆ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಾದ ಅಗತ್ಯ ಇದೆ ಎಂದರು.



		
		
		
