ಮಾನ್ವಿ: ಪಟ್ಟಣದ ಬಿ.ವಿ.ಆರ್- ಇ-ಟೆಕ್ನೋಶಾಲೆಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಬಸವ ಕೇಂದ್ರ ಮಾನ್ವಿ, ಬಿ.ವಿ.ಆರ್- ಇ-ಟೆಕ್ನೋಶಾಲೆ ಮಾನ್ವಿ, ಎ.ಪಿ.ಎಂ.ಸಿ.ಶಿಕ್ಷಕರ ಬಳಗ ಮಾನ್ವಿ ಸಂಯುಕ್ತಾಶ್ರಯದಲ್ಲಿ ನಡೆದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರಿನ ಉದ್ಘಾಟಿಸಿ ಸದಸ್ಯ ಸಂಚಾಲಕರಾದ ಎಂ.ಖಾಸೀಮ್ ಮಲ್ಲಿಗೆಮಡುವು ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸ್ಥಳಿಯ ಪ್ರಾತಿಭವಂತ ಕಲಾವಿದರನ್ನು ಗುರುತಿಸಿ ಅವರನ್ನು ಮೂಖ್ಯವಾಹಿನಿಗೆ ತರುವುದು ಹಾಗೂ ಜನರಿಗೆ ಅವರಲ್ಲಿನ ಕಲೆಗಳನ್ನು ಪರಿಚಯಿಸುವುದಕ್ಕೆ ವೇದಿಕೆ ಕಲ್ಪಿಸಿ ಅವರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಜಿಲ್ಲಾ,ಮತ್ತು ತಾಲೂಕು ಮಟ್ಟದಲ್ಲಿ ಸ್ಥಳಿಯ ಪ್ರತಿಭೆಗಳಿಂದ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಗಾಯನವನ್ನು ವಿರೂಪಾಕ್ಷಯ್ಯ ವಂದಲಿ, ಕರ್ನಾಟಕ ಶಾಸ್ತಿçಯ ಸಂಗೀತವನ್ನು ವಿದ್ವಾನ್ ನಾರಾಯಣಸ್ವಾಮಿ ತಂಡ ಕೋಲಾರ, ಸುಗಮ ಸಂಗೀತ ದಡೆಸೂಗುರು ಇಬ್ರಾಹಿಂ ಅವರಿಂದ , ಭಕ್ತಿ ಸಂಗೀತ ವೀರೇಶ್ ಬಿ.ಹೂಗಾರ್ ಕಲಬುರಗಿ,ವಚನ ಗಾಯನ ವೀರೇಶ ಸಾಲಿಮಠ ಸಿಂಧನೂರು,ದಾಸವಾಣಿ ಗೋಪಾಲ ಗುಡಿಬಂಡೆ ರಾಯಚೂರು, ಭರತನಾಟ್ಯ ಪ್ರದರ್ಶನ ಶ್ರೇಯಸ್ ಜೋಶಿ ರಾಯಚೂರು. ಕುಮಾರವ್ಯಾಸ ವಿರಚಿತ ಕರ್ಣಾಟಕ ಭಾರತ ಕಥಾಮಂಜರಿಯ ವ್ಯಾಖ್ಯಾನವನ್ನು ಗಮಕ ಕಲಾವಿದರಾದ ವೆಂಕಟೇಶ್ ನವಲಿ ಹಾಗೂ ವ್ಯಾಖ್ಯಾನವನ್ನು ರಾಯಚೂರಿನ ವೆಂಕಟರಾವ್ ಕುಲಕರ್ಣಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಶಿವರಾಜ್ ನಾಯಕ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರಿನ ರಿಜಿಸ್ಟಾರ್ ಎನ್.ನರೇಂದ್ರಬಾಬು,ಸದಸ್ಯರಾದ ಹುಸೇನ್ ಸಾಬ್, ಶಂಕರ್ ಬಿ.ಹೂಗಾರ, ರಮೇಶ ಗಬ್ಬೂರು, ಬಸಪ್ಪ ಭಜಂತ್ರಿ, ಕ.ಸಾ.ಪ. ತಾ.ಅಧ್ಯಕ್ಷರಾದ ರವಿಕುಮಾರ ಪಾಟೀಲ್,ಜಿಲ್ಲಾ ಕ.ಸಾ.ಪ.ಕಾರ್ಯದರ್ಶಿ ತಾಯಪ್ಪ ಬಿ.ಹೋಸೂರ್, ನಿಕಟ ಪೂರ್ವ ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಡಾ.ಬಸವ ಪ್ರಭು ಪಾಟೀಲ್, ಬಿ.ವಿ.ಆರ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ವಿ.ರೆಡ್ಡಿ, ಗಾಯಕರಾದ ಅಂಬಯ್ಯನುಲಿ,ಬಸವಕೇAದ್ರದ ತಾ.ಅಧ್ಯಕ್ಷರಾದ ರಂಗಣ್ಣ, ಕಾರ್ಯದರ್ಶಿ ಮಹಮ್ಮದ್ ಮುಜೀಬ್, ಮನ್ಸಾಲಿ ಯಂಕಯ್ಯಶೆಟ್ಟಿ, ವಿಜಯಲಕ್ಷಿö್ಮÃ ಸೇರಿದಂತೆ ಇನ್ನಿತರರು ಇದ್ದರು. ತಾಲೂಕಿನ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.