—————————————ಹತ್ತು ವರ್ಷಗಳ ಹಳೆಯ ವಿವಾದಕ್ಕೆ ತಮನ್ನಾ ಭಾಟಿಯಾ ಸ್ಪಷ್ಟನೆ
ಸುಮಾರು ಒಂದು ದಶಕದ ನಂತರ ಅಂದರೆ ಹತ್ತು ವರ್ಷಗಳ ನಂತರ ಖ್ಯಾತ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬಾಹುಬಲಿ-2 ಕುರಿತು ಸ್ಪಸ್ಟನೆ ನೀಡಿದ್ದು, ವಿವಾದಕ್ಕೆ ತೇಪೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ತಮನ್ನಾ ಅವರು ಆವಂತಿಕಾ ಆಗಿ ಕಾಣಿಸಿಕೊಂಡಿದ್ದರು. ಬಾಹುಬಲಿ ಭಾಗ-2 ರಲ್ಲಿಯೂ ಆವಂತಿಕಾ ಪಾತ್ರ ಮುಂದುವರೆದಿತ್ತು. ಬಾಹುಬಲಿ ಶಿವು- ಪ್ರೇಯಸಿ ಆವಂತಿಕಾಳನ್ನು ಅಲಂಕರಿಸುತ್ತಾನೆ. ಈ ಹಂತದಲ್ಲಿ ಆವಂತಿಕಾಳ ಬಟ್ಟೆ ತೆಗೆಯುವ ದೃಶ್ಯಗಳಿವೆ. ಈ ದೃಶ್ಯದಲ್ಲಿ ಆವಂತಿಕಾಳ ( ತಮನ್ನಾ ಭಾಟಿಯಾ) ಮೇಲುಡುಗೆಯನ್ನು ನಟ ಪ್ರಭಾಸ ಕಳಚುತ್ತಾರೆ. ಈ ಸನ್ನಿವೇಶ ಚರ್ಚೆಗೆ ಕಾರಣವಾಗಿತ್ತು.

ಈ ಕುರಿತು ತಮನ್ನಾ ಭಾಟಿಯಾ ಸ್ಪಷ್ಟನೆ ನೀಡಿದ್ದು, ಇದು ದೌರ್ಜನ್ನವಲ್ಲ. ಇದು ಆವಂತಿಕಾಳ ಅನ್ವೇಷಣೆ ಎಂದು ಹೇಳುವ ಮೂಲಕ ತಮನ್ನಾ ಭಾಟಿಯಾ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರಂತೆ ವರದಿಗಳು ಹೇಳಿವೆ.
-ಕೃಪೆ ( ಸುದ್ದಿ ಮೂಲ ಸಂಗ್ರಹದಿಂದ)




