ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪರವಾಗಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಪರವಾಗಿ ಹಲವು ಜನ ಶಾಸಕರಿದ್ದಾರೆ. ಅವರನ್ನು ಅಧಿಕಾರದಿಂದ ಇಳಿಸುವುದು ಅಷ್ಟು ಸುಲಭವಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೇವಲ ಹತ್ತು ಇಪ್ಪತ್ತು ಮಂದಿಯ ಬೆಂಬಲದಿಂದ ಸಿಎಂ ಆದವರಲ್ಲ. ಬಿಜೆಪಿ ಸುಮ್ಮನೆ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದೆ. ಆದರೆ ಅವರನ್ನು ಇಳಿಸುವುದು ಅಷ್ಟು ಸುಲಭವಾದ ಮಾತಲ್ಲ .ಕಾಂಗ್ರೆಸ್ ಪಕ್ಷದ ಕೊನೆಯ ಮೊಳೆ ಸಿಎಂ ಸಿದ್ದರಾಮಯ್ಯ ಎಂದು ಯತ್ನಾಳ್ ಹೇಳಿದ್ದಾರೆ.
ಬಿಎಸ್‌ವೈ ಕುಟುಂಬ ಮತ್ತು ಬಿಜೆಪಿ ವಿರುದ್ದ ಹೇಳಿಕೆ ನೀಡಿದ್ದ ಆರೋಪದ ಮೇಲೆ ಯತ್ನಾಳ್ ಅವರನ್ನು ಬಿಜೆಪ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಅವರು ಸಿಎಂ ಪ್ರಶಂಸೆಯಲ್ಲಿ ತೊಡಗಿರುವುದು ಹಲವರ ಹುಬ್ಬೇರಿಸಿದೆ.