ಬಸವನಬಾಗೇವಾಡಿ: ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಬಸವ ಭವನದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ, ಬಿ ಕೆ ಅಂಬಿಕಾ ಅಕ್ಕನವರ ಅಮೃತ ಮಹೋತ್ಸವ ಹಾಗೂ ಸಮರ್ಪಿತ ಸಹೋದರಿ ಸಹೋದರರ ಶಷ್ಟಬ್ದಿ ಸಮಾರಂಭ ಜರುಗಿತು.
ಸನ್ಮಾನ ಸ್ವೀಕರಿಸಿ ಬಿ.ಕೆ ಅಂಬಿಕಾ ಅಕ್ಕನವರು ಮಾತನಾಡಿ, ಪಟ್ಟಣದ ಬೋಜಪ್ಪ ಹೊಸಮನಿ ಪರಿವಾರದಲ್ಲಿ ಪದ್ಮಾ ಅಕ್ಕ ಹಾಗೂ ಪ್ರಕಾಶ ಅಣ್ಣ ಸೇರಿದಂತೆ ಅವರ ಪರಿವಾರವೇ ಪೂರ್ಣ ಪ್ರಮಾಣದಲ್ಲಿ ಭಗವಂತನ ಸೇವೆ ಮಾಡುವ ಮೂಲಕ ಇದೀಗ ನೂತನ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪ್ರಕಾಶ್ ಅಣ್ಣಾ ಮಾತನಾಡಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಸೇವೆ ವಿಸ್ತರಿಸಬೇಕಾಗಿದೆ.
ನೂತನ ಕಟ್ಟಡಕ್ಕೆ ಸಚಿವ ಶಿವಾನಂದ ಎಸ್ ಪಾಟೀಲ ಅವರ ಸಹಕಾರ ಅಗತ್ಯವಾಗಿದೆ ಎಂದರು. ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಭಾವನೆ ಶುದ್ಧ ಇದ್ದಲ್ಲಿ ಮಾತ್ರ ಭಗವಂತನ ಸೇವೆ ಹಾಗೂ ಒಲುಮೆ ಸಾಧ್ಯ ಎಂದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ.ವೈ ಬಸಾಪುರ್, ಬಿಕೆ ಸುರೇಖಾ ಅಕ್ಕ ಸೇರಿದಂತೆ ಅನೇಕ ಮಾತನಾಡಿದರು.
ಈ ಸಂದರ್ಭದಲ್ಲಿ ಭಾವನಾ, ಶಶಿಕಲಾ, ಶಾಂತಾ, ಬೇಬಿ, ಸುಲೋಚನಾ ಅಕ್ಕ ಸೇರಿದಂತೆ ಅನೇಕ ಅಕ್ಕಂದಿರು, ಮಹಾವೀರ್ ಹೊಸಮನಿ, ಸಿದ್ದಣ್ಣ ಕಲ್ಲೂರ್, ಎಚ್. ಎಸ್ ಗುರಡ್ಡಿ ಸೇರಿದಂತೆ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವ ಜಿಲ್ಲೆಯ ವಿವಿಧ ವಿವಿ ಗಳಿಂದ ದೈವಿ ಪರಿವಾರದವರು ಆಗಮಿಸಿದ್ದರು.
ಅರ್ಚನ ಮುಳ್ಳೂಳ್ಳಿ ಅದ್ವಿಕಾ, ಈಶ್ವರಿ ಮನಗೂಳಿ ಅವರಿಂದ ನಡೆದ ನೃತ್ಯ ಪ್ರೇಕ್ಷಕರ ಮನ ಸೆಳೆಯಿತು. ಬಸವರಾಜ್ ಪಾಟೀಲ್ ಹಾಗೂ ರೇಣುಕಾ ಅಕ್ಕ ನಿರೂಪಿಸಿದರು. ಬಸವರಾಜ ಶಿವಣಗಿ ಪ್ರಾರ್ಥಿಸಿದರು ಕಾರ್ಯಕ್ರಮದ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಶಾಂತಿ ಯಾತ್ರೆ ಜರುಗಿತು. ರಥಯಾತ್ರೆ ಮುನ್ನ ಪಟ್ಟಣದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೇರವೇರಿಸಲಾಯಿತು.
ವರದಿ: ಗುರುರಾಜ್. ಬ. ಕನ್ನೂರ




