Ad imageAd image

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ :ಸಿದ್ದಯ್ಯ ಸ್ವಾಮಿ

Bharath Vaibhav
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ :ಸಿದ್ದಯ್ಯ ಸ್ವಾಮಿ
WhatsApp Group Join Now
Telegram Group Join Now

ಮುದಗಲ್ಲ:  ಪಟ್ಟಣದ ಸಾಲಿಮಠದಲ್ಲಿ ನವರಾತ್ರಿ ಉತ್ಸವದಂಗವಾಗಿ ಹಮ್ಮಿಕೊಂಡ ಶ್ರೀಶಾಂಭವಿ ಮಾತೆಯ
ದೇವಿ ಪುರಾಣ ಪ್ರವಚನವು ಸಾಲಿಮಠದ ಸಿದ್ದಯ್ಯ ಸ್ವಾಮಿ ಸಾನಿಧ್ಯದಲ್ಲಿ ವಿಜಯ ದಶಮಿ ಪ್ರಯುಕ್ತ 9 ದಿನಗಳ ವರೆಗೂ ಪ್ರತಿ ದಿನ ಸಂಜೆ 7 ರಿಂದ 9:30 ಗಂಟೆ ವರಗೆ ನಡೆಯುವ ಶಾಂಭವಿ ಮಾತೆಯ ಪುರಾಣ ಪಠಣ ಶುಕ್ರವಾರವು ಮಾತೆಯ ಶ್ರದ್ಧಾ ಭಕ್ತಿ ಯಿಂದ ವೇದ ಘೋಷಗ ಳೊಂದಿಗೆ ಆರಂಭ ವಾಯಿತು.

ಸಾಲಿಮಠದ ಸಿದ್ದಯ್ಯ ಸ್ವಾಮಿ ಈ ಪುರಾಣದಲ್ಲಿ ದೇವಿ ಮಹಾತ್ಮೆ ಪುರಾಣ ಪ್ರವಚನದಲ್ಲಿ ಮಾತನಾಡಿದರು ಶ್ರೀದೇವಿಯು ದುರ್ಗುಣಗಳ ಆಗರವಾದ ರಕ್ಕಸರನ್ನು ಸಂಹಾರ ಮಾಡಿ ಶಿಷ್ಟರನ್ನು ಸಂರಕ್ಷಿಸಿ ಧರ್ಮ ಸ್ಥಾಪಿಸಿ ಲೋಕ ಕಲ್ಯಾಣ ಮಾಡಿದಳು ಸುಜ್ಞಾನವೆಂದರೆ ದೇವಿ ಹಾಗೂ ಅಜ್ಞಾನವೆಂದರೆ ರಾಕ್ಷಸರು ಇವರಿಬ್ಬರ ನಡುವೆ ನಡೆದ ಧರ್ಮ ಯುದ್ದವೇ ಪುರಾಣದಲ್ಲಿ ಬರುವ ಪ್ರತಿಯೊಂದು ಅಧ್ಯಾಯದ ಸಾರಂಶವಾಗಿದೆ
ದೇವಿ ಪುರಾಣ ದೇಹದ ಪುರಾಣವಿದ್ದಂತೆ
ದೇವಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್‌ ಶಕ್ತಿ ದೇವತೆಯಾಗಿದ್ದಾಳೆ. ಪುರಾಣವೆಂದರೆ ದೇಹದ ಪುರಾಣವಿದ್ದಂತೆ ದೇಹ ದಲ್ಲಿರುವ ಅವಗುಣಗಳನ್ನು ಕಳೆಯುವುದೇ ರಾಕ್ಷಸ ಸಂಹಾರವಿದ್ದಂತೆ ನಮ್ಮಲ್ಲಿ ಇರುವ ದುರ್ಗುಣಗ ಳಾದ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳನ್ನು ಕಳೆದು ನಮ್ಮಲ್ಲಿಪ್ರೀತಿ,ವಿಶ್ವಾಸ,
ನಂಬಿಕೆ, ಸಂತೋಷ, ಧಾರ್ಮಿಕತೆ ಬೆಳೆಸುತ್ತದೆ ಎಂದರು

ಅದರಂತೆ ಈರಪ್ಪ ಹಡಪದ ಅವರು ಪುರಾಣದಲ್ಲಿ ಸುಜ್ಞಾನ ಮತ್ತು ಅಜ್ಞಾನದ ನಡುವೆ ನಡೆಯುವ ಯುದ್ಧವೇ ದೇವಿ ಪುರಾಣದಲ್ಲಿ ಬರುವ ಮುಖ್ಯಾಂಶವಾಗಿದ್ದು ಶ್ರದ್ಧೆಯಿಂದ ಪುರಾಣ ಆಲಿಸಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಶಾಂಭವಿ ಸದ್ಭಕ್ತ ಮಂಡಳಿ,ಹಾಗೂ ಭಕ್ತರಿದ್ದರು ಉಪಸ್ಥಿತ ರಿದ್ದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!