——————-26 ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಉಪನ್ಯಾಸಕ ಹಟ್ಟಿಮಣಿ ಅಭಿಮತ
ರಾಯಬಾಗ: ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀಸಿದ್ದರಾಮೇಶ್ವ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಮುಗಳಖೋಡ ದಲ್ಲಿ ದಿನಾಂಕ 26/07/2025 ರಂದು 26 ನೇ ಕಾರ್ಗಿಲ ವಿಜಯೋತ್ಸವವನ್ನು ಆಚರಿಸಲಾಯಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕರಾದ ಬಿ .ವ್ಹಿ . ಹಟ್ಟಿಮನಿಯವರು ದೇಶ ರಕ್ಷಣೆ ಮಾಡಿದ ವೀರ ಯೋಧರನ್ನು ಸ್ಮರಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿ ಹೇಳಿದರು.
ಕಾರ್ಯಕ್ರಮದ ರೂವಾರಿಯಾದ ಶಿಕ್ಷಣ ಶಾಸ್ತ್ರ ಉಪನ್ಯಾಸಕರಾದ ಎಸ್.ಬಿ.ಕಡಕಬಾಂವಿ ಯವರು ದೇಶದ ಏಕತೆಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದರು. ಇನ್ನು ಈ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವನ್ನ ವಹಿಸಿದ್ದ ಶ್ರೀಸಿದ್ಧರಾಮೇಶ್ವರ ಪಿ .ಯು ಕಾಲೇಜಿನ ಪ್ರಾರ್ಚಾ ರಾದ ಎಸ್.ಜಿ.ಹಂಚಿನಾಳ ಹಾಗೂ ಅತಿಥಿ ಸ್ಥಾನವನ್ನ ಅಲಂಕರಿಸಿದ ಶ್ರೀಸಿದ್ದರಾಮೇಶ್ವರ ಫ್ರೌಢ ಶಾಲೆ ಮುಖ್ಯೋಪಾಧ್ಯಯರಾದ ವ್ಹಿ ಎಂ. ಕರಡಿಯವರು ಕೂಡಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ಧರಾಮೇಶ್ವರ ಪದವಿ ವಿದ್ಯಾಲಯದ ಪ್ರಾಶುಂಪಾಲರಾದ ಜಿ.ಎಸ್ ಜಂಬಗಿಯವರು ವಹಿಸಿಕೊಂಡಿದ್ದರು ಇನ್ನುಳಿದ ಉಪನ್ಯಾಸಕಾರದ ಎಂ ವಾಯ್ ಹುಲಿಯನ್ನವರ, ಎಂ. ಡಿ ಹಳಬರ. ಎಸ್.ಎಂ ಮದಲಮಟ್ಟಿ
ಎ.ಪಿ . ಖೇತಗೌಡರ ಉಪಸ್ಥಿತರಿದ್ದರು.
ಅಂತೆಯೇ ಈ ಕಾರ್ಯಕ್ರಮದ ನಿರೂಪಣಿ ಹಾಗೂ ವಂದನಾರ್ಪನೆಯನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಾಲಾ ಢವಳೇಶ್ವರ ನಡೆಸಿಕೊಟ್ಟರು.
ವರದಿ:ಪರಶುರಾಮ ತೆಳಗಡೆ




