ವಿಶ್ವಕಪ್ ಟ್ವೆಂಟಿ-೨೦ ಮಾದರಿಯಾಗಲಿ, ೫೦ ಓವರುಗಳ ಮಾದರಿಯಾಗಲಿ, ಈ ದಕ್ಷಿಣ ಆಫ್ರಿಕಾ ಆಟಗಾರರಿಗೆ ಪಾಪ ನಸೀಬ್ ಇಲ್ಲ ಎನ್ನಿಸುತ್ತೆ.
ಎರಡೂ ಮಾದರಿಯ ಸೀಮಿತ ಓವರುಗಳ ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದವರು ಎಂದೂ ಕಳಪೆ ಪ್ರದರ‍್ಶನ ತೋರಿ ಪಂದ್ಯಾವಳಿಯಿAದ ನರ‍್ಗಮಿಸಿಲ್ಲ. ಎಲ್ಲ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದವರು ಉತ್ತಮ ಪ್ರದರ‍್ಶನ ನೀಡುತ್ತಲೇ ಬಂದಿದ್ದಾರೆ.
ಭಾರತ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಈ ಚುಟುಕು ಮಾದರಿಯ ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾ (ಹರಿಣಿಗಳು) ಸೆಮಿಫೈನಲ್‌ವರೆಗೆ ಅತ್ಯುತ್ತಮ ಪ್ರದರ‍್ಶನವನ್ನೇ ನೀಡಿದ್ದರು. ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಆಲರೌಂಡರ್‌ಗಳಿAದ ತುಂಬಿತ್ತು.
ಪAದ್ಯಾವಳಿಯುದ್ದಕ್ಕೂ ಎಲ್ಲ ಪಂದ್ಯಗಳಲ್ಲಿ ಹೊಸತನ ಆಟ ತೋರಿಸಿ ಆ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾ ನಿನ್ನೇ ಮತ್ತೇ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರೊಂದಿಗೆ ನಿರಾಸೆಯೊಂದಿಗೆ, ಭಾರವಾದ ಹೆಜ್ಜೆಗಳೊಂದಿಗೆ ಸ್ವದೇಶಕ್ಕೆ ಮರಳಿದೆ.
ಪಾಪ ! ಈ ದಕ್ಷಿಣ ಆಫ್ರಿಕಾದವರ ನಸೀಬ್ ಬಾಳ ಕೆಟ್ಟ ಐತಿ ನೋಡ್ರಿ




