Ad imageAd image

ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ

Bharath Vaibhav
ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ
WhatsApp Group Join Now
Telegram Group Join Now

ಐನಾಪುರ  : ಸಹಕಾರಿ ಕ್ಷೇತ್ರ ಇಲ್ಲದೆ ಹೋಗಿದರೆ ಉತ್ತರ ಕರ್ನಾಟಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಬ್ಬು ಬೇಳೆಯಲು ಹಾಗುದೊಡ್ಡಪ್ರಮಾಣದ ಕಾರ್ಖಾನೆಗಳು ನಿರ್ಮಾಣವಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ರವಿವಾರ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಮಲ್ಲಿಕಾರ್ಜುನ ಗುರುದೇವ ಆಶ್ರಮದಲ್ಲಿ ಆಯೋಜಿಸಿದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡದ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕೆಲವೊಂದು ರಾಜ್ಯ ಕಾರಣಿಗಳು ಸಹಕಾರಿ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡುವವರು ಬಳಿ ಆನೆಗಳು ಎಂದು ಆಪಾದನೆ ಮಾಡುತ್ತಾರೆ.ಆದರೆ ಸಹಕಾರಿ ದೊಡ್ಡ ಪ್ರಮಾಣದ ಕಾರ್ಯ ಮಾಡಿದೆ.ಎಂದ ಅವರು ಅಥಣಿ ತಾಲ್ಲೂಕು ಎರಡರಲ್ಲಿ ಪ್ರಸಿದ್ಧವಾಗಿದೆ ಮೋದಲೇನೆದಾಗಿ ನಬಾರ್ಡ್ ಗೈಡಲೈನ್ಸ ಪ್ರಕಾರ ತಾಲ್ಲೂಕಿನ
155 ಸಹಕಾರಿ ಸ್ವಸಹಾಯ ಸಂಘಗಳು ಪಾರದರ್ಶಿ,ಬದ್ದತೆ ಇಚ್ಛಾಶಕ್ತಿ ಕಾರಣದಿಂದ ಆನ್ಲೈನ್ ಕಂಪ್ಯೂಟರ್ ದಲ್ಲಿ ನಂಬರ ಒನ್ ಸ್ಥಾನದಲ್ಲಿದೆ ಎರಡನೆಯದಾಗಿ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲ್ಲೂಕು ಎಂದರೆ ಅದು ಅಥಣಿ ತಾಲ್ಲೂಕು ಕಾರಣ ಒಂದು ವರ್ಷಕ್ಕೆ 76 ಲಕ್ಷ ಟನ್ ಕಬ್ಬು ಬೆಳೆಯುವ ಕರ್ನಾಟಕ ರಾಜ್ಯ ಯಾವ ತಾಲ್ಲೂಕು ಇಲ್ಲ ಆದರೆ ಕೇವಲ ಮಂಡ್ಯಜಿಲ್ಲೆಯಲಿಯಲ್ಲಿ 18 ಲಕ್ಷ ಟನ ಕಬ್ಬು ಬೆಳೆದು ಸಕ್ಕರೆ ನಾಡು ಎಂದು ಹೇಳುತ್ತದೆ.

ಎಂದ ಅವರು ಇನ್ನು ಎರಡು ವರ್ಷಗಳ ನಂತರ ಆರು ತಿಂಗಳಲ್ಲಿ ತಾಲ್ಲೂಕಿನ ಮಹತ್ವದ ಯೋಜನೆಗಳಾದ ಬಸವೇಶ್ವರ ಯಾತ ನೀರಾವರಿ, ಕೊಟ್ಟಲಗಿಯ ಅಮ್ಮಾರಾಜೇಶ್ವರಿ ನೀರಾವರಿ ಯೋಜನೆ ಪೂರ್ಣಗೊಂಡ ನಂತರ 25 ಲಕ್ಷ ಟನ್ ಕಬ್ಬು ಬೆಳೆದು ತಾಲ್ಲೂಕಿನಲ್ಲಿ ಒಂದು ಕೋಟಿ ಟನ್ ನಷ್ಟು ಕಬ್ಬು ಬೆಳೆಯುವ ವವ್ಯಸ್ಥೆಯಾಗುತ್ತದೆ ಎಂದರು.

ದಿವ್ಯ ಸಾನಿದ್ಯವನ್ನು ಗುಣದಾಳ ಕಲ್ಯಾಣ ಹಿರೇಮಠದ ಡಾ, ವಿವೇಕಾನಂದ ಸ್ವಾಮಿಜಿ ಹಾಗು ಬಸವೇಶ್ವರ ಸ್ವಾಮಿಜಿ ವಹಿಸಿ ಆರ್ಶಿವಚನ ನೀಡಿದರು.

ವಾ. ಕ. ರ. ಸಾ ಸಂಸ್ಥೆ ಅಧ್ಯಕ್ಷ ಬಿ ಡಿ ಸಿ ಸಿ ಬ್ಯಾಂಕ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಮಾತನಾಡಿ, ಸಹಕಾರಿ ಚಳುವಳಿಗೆ 120 ವರ್ಷಗಳ ಇತಿಹಾಸವಿದ್ದು, ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ. ದೇಶದಲ್ಲಿ ಸುಮಾರು 34 ಲಕ್ಷ ಕುಟುಂಬಗಳು 23 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ಪಡೆದು, ಈ ದೇಶದಲ್ಲಿ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದ ಅವರು ಮಕ್ಕಳಿಗೆ ಕೇವಲ ಆಸ್ತಿ, ಮನೆ,ಬ್ಯಾಂಕ್ ಡಿಪಾಜಿಟ್ ಮಾಡಿದರೆ ಆಗುವುದಿಲ್ಲ ಬದಲಾಗಿ ಅವರಲ್ಲಿ ಸಂಸ್ಕಾರ, ಧರ್ಮ ಕಲಿಸಬೇಕು.ನಾವು ಬದುಕಬೇಕು ಇತರರು ಬದುಕ ಬೇಕು ಎಂಬ ಭಾವನೆ,ಪ್ರಾಮಾಣಿಕತೆ ನಿಶ್ವಾರ್ಥ,ಪಾರದರ್ಶಕತೆ ಯಿಂದ ಮಾತ್ರ ಸಹಕಾರಿ ಸಂಸ್ಥೆಗಳು ಬೆಳೆಯಲು ಸಾಧ್ಯೆ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸುಭಾಷ್ ಪರಗೌಡಾ ಪಾಟೀಲ್ ವಹಿಸಿದರು. ಅತಿಥಿಗಳಾಗಿ ಶಂಕರ ವಾಘಮೋಡೆ, ರಾಕೇಶ ಅರ್ಜುನವಾಡ, ಶಂಕರ ನಂದೇಶ್ವರ , ಸಹಕಾರಿ ಶಿಕ್ಷಕರಾದ ಶ್ರೀಶೈಲ ಯಡಹಳ್ಳಿ, ಬ್ಯಾಂಕ್ ನಿರೀಕ್ಷಕರಾದ ಮಹಾದೇವ್ ಉಳ್ಳಾಗಡ್ಡಿ, , ಬಿಡಿಸಿಸಿ ಬ್ಯಾಂಕ್ ಐನಾಪುರ ವ್ಯವಸ್ಥಾಪಕ ಸಂಜಯ್ ಗುಮತಾಜ, ವೇದಿಕೆ ಮೇಲಿದರು.

ಇ ಸಂದರ್ಭದಲ್ಲಿ ಪಾರ್ವತಿ ಮಂಟೂರ, ವಿಶ್ವನಾಥ ಪಾಟೀಲ, ಅಣ್ಣಾಸಾಬ ಪಾಟೀಲ, ಅಪ್ಪಾಸಾಬ ಕರಬಸನವರ, ಶ್ರೀ ಶೈಲ ತ್ರಿಕಾಣಿ, ಕಾಶಿಬಾಯಿ ಮೋಕಾಶಿ ಮುನೀರ ಅಲಾಸೆ, ಸದಾಶಿವ ಶೇಗುಣಸಿ, ಗೋಪಾಲ ಕಾಂಬಳೆ ಕಾಶಿನಾಥ ಕೋಳಿ ಶೋಭಾ ಪಾಟೀಲ ,ಕಾರ್ಯನಿರ್ವಾಹಕ ಗುರುಪಾದ ಜತ್ತಿ ದತ್ತಾ ಕದಮ,ಅಶೋಕ ಇಂಚಲಕರಂಜಿ ಇತರರು ಇದ್ದರು.
ಶಿವಗೌಡ ಚೌಗಲಾ ನಿರೂಪಿಸಿದರು, ಈರಪ್ಪಾ ಜಂಬಗಿ ಸ್ವಾಗತಿಸಿದರು. ವಿವೇಕ ಜತ್ತಿ ವಂದಿಸಿದರು.

ವರದಿ : ಮುರಗೇಶ ಗಸ್ತಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!