Ad imageAd image

ಅತ್ತ ಸಿಎಂಗೆ ಮುಡಾ ತಲೆ ಬಿಸಿ : ಇತ್ತ ಡಿಸಿಎಂ – ಪರಮೇಶ್ವರ್ ಭೇಟಿ 

Bharath Vaibhav
ಅತ್ತ ಸಿಎಂಗೆ ಮುಡಾ ತಲೆ ಬಿಸಿ : ಇತ್ತ ಡಿಸಿಎಂ – ಪರಮೇಶ್ವರ್ ಭೇಟಿ 
WhatsApp Group Join Now
Telegram Group Join Now

ಬೆಂಗಳೂರು : ಸೋಮವಾರ ಬೆಳ್ಳಂಬೆಳಗ್ಗೆ ಡಿಸಿಎಂ ಡಿಕೆಶಿ ಹಾಗೂ ಗೃಹ ಸಚಿವ ಪರಮೇಶ್ವರ್ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿದ್ದಾರೆ.

‘ಮುಡಾ’ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ FIR ಆಗಿರುವ ಬೆನ್ನಲ್ಲೇ ಇಬ್ಬರು ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ಆರಂಭವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ವಿಪಕ್ಷಗಳು ಕೂಡ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದಿದೆ. ಈ ನಡುವೆ ಡಿಕೆಶಿ-ಪರಂ ಭೇಟಿ ಕುತೂಹಲ ಮೂಡಿಸಿದೆ. ಮೊನ್ನೆಯಷ್ಟೇ ಕನಕಪುರದಲ್ಲಿ ಮಾತನಾಡುವ ವೇಳೆ ಡಿಸಿಎಂ ಡಿಕೆಶಿ , ತಾವು ಕೂಡ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದರು. ಡಿಕೆಶಿ ಮಾತು ಎಲ್ಲೆಡೆ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!